ಕರ್ನಾಟಕ

karnataka

ETV Bharat / state

"ದಿ ಕಾಶ್ಮೀರ್​ ಫೈಲ್ಸ್​" ಚಿತ್ರ ಪ್ರದರ್ಶನಕ್ಕೆ ಆಗ್ರಹ: ಹಿಂದೂ ಕಾರ್ಯಕರ್ತರಿಂದ ಥಿಯೇಟರ್​ಗೆ ಮುತ್ತಿಗೆ - Pressure for the screening of "The Kashmir Files" in Bhatkal taluk of Uttara Kannada district

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ "ದಿ ಕಾಶ್ಮೀರ್​ ಫೈಲ್ಸ್​" ಚಿತ್ರದ ಪ್ರದರ್ಶನಕ್ಕಾಗಿ ಒತ್ತಾಯಿಸಿ, ಚಿತ್ರ ಮಂದಿರದ ಎದುರು ಸ್ಥಳೀಯ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

protest in front of movie theater by Hindu activists
"ದಿ ಕಾಶ್ಮೀರಿ ಫೈಲ್" ಚಿತ್ರ ಪ್ರದರ್ಶನಕ್ಕೆ ಆಗ್ರಹ

By

Published : Mar 14, 2022, 5:56 PM IST

ಭಟ್ಕಳ (ಉತ್ತರಕನ್ನಡ):ತಾಲೂಕಿನ ಮಣ್ಕುಳಿಯಲ್ಲಿರುವ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ "ದಿ ಕಾಶ್ಮೀರ್​ ಫೈಲ್ಸ್​" ಚಿತ್ರ ಪ್ರದರ್ಶನ ಮಾಡುವಂತೆ ಆಗ್ರಹಿಸಿ ಭಟ್ಕಳದ ಹಿಂದೂ ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದರು.

"ರಾಧೆ ಶ್ಯಾಮ್" ಸ್ಥಗಿತಗೊಳಿಸಿ, ಹಿಂದೂ ಪಂಡಿತರ ನೈಜ ಚಿತ್ರಕತೆ ಆಧಾರಿತ ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾವನ್ನು ಪ್ರದರ್ಶಿಸುವಂತೆ ಆಗ್ರಹಿಸಿ ಹಿಂದೂ ಕಾರ್ಯಕರ್ತರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿದ್ದರು.

ಹಿಂದೂ ಕಾರ್ಯಕರ್ತರಿಂದ ಚಿತ್ರ ಮಂದಿರಕ್ಕೆ ಮುತ್ತಿಗೆ

ಈ ವೇಳೆ ಹಿಂದೂ ಕಾರ್ಯಕರ್ತರು ಹಾಗೂ ಚಿತ್ರಮಂದಿರದ ಮೇಲ್ವಿಚಾರಕರ ನಡುವೆ ಮಾತುಕತೆ ನಡೆದು, ಕೊನೆಗೆ ರಾತ್ರಿ 8.45 ರ ಚಿತ್ರ ಪ್ರದರ್ಶನಕ್ಕೆ "ದಿ ಕಾಶ್ಮೀರ್​ ಫೈಲ್ಸ್​" ಚಿತ್ರವನ್ನು ಪ್ರದರ್ಶಿಸಲಾಗುವುದೆಂದು ಮೇಲ್ವಿಚಾರಕರರು ಭರವಸೆ ನೀಡಿದರು.

ಇದನ್ನೂ ಓದಿ:'ದಿ ಕಾಶ್ಮೀರ್​ ಫೈಲ್ಸ್​'​ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಕಾಂಗ್ರೆಸ್​ ಶಾಸಕ ಆಗ್ರಹ

ಈ ವೇಳೆ ಮಾತನಾಡಿದ ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಇತಿಹಾಸದಲ್ಲಿ ಮುಚ್ಚಿಟ್ಟಂತ ಕಾಶ್ಮೀರಿ ಪಂಡಿತರ ನೈಜ ಚಿತ್ರಕತೆ ಆಧಾರಿತ ಚಿತ್ರವನ್ನು ದೇಶ ಭಕ್ತರಿಗೆ ಅನಾವರಣ ಮಾಡಿದ್ದಾರೆ. ಆದರೆ ಕೆಲವೊಂದು ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ನಡೆಸದೆ, ಹೌಸ್ ಫುಲ್ ಎಂಬ ಬೋರ್ಡ್​ ಹಾಕುವ ಮೂಲಕ ಷಡ್ಯಂತರ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ಭಟ್ಕಳದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ "ದಿ ಕಾಶ್ಮೀರ್​ ಫೈಲ್ಸ್​" ಚಿತ್ರ ಪ್ರದರ್ಶನಗೊಳ್ಳದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಅವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

For All Latest Updates

TAGGED:

ABOUT THE AUTHOR

...view details