ಕರ್ನಾಟಕ

karnataka

ETV Bharat / state

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹ: ಕುಮಟಾದಲ್ಲಿ ಬೃಹತ್ ಪಾದಯಾತ್ರೆ - ಹೊನ್ನಾವರದಿಂದ ಕುಮಟಾದವರೆಗೆ ಬೃಹತ್ ಪಾದಯಾತ್ರೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವ ಭರವಸೆ ನೀಡಿದ್ದ ಸರ್ಕಾರ ಮೌನವಹಿಸಿದೆ. ಇತ್ತ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಮತ್ತೆ ಹೋರಾಟ ಜೋರಾಗಿದೆ.

Massive Padayatra in Kumta
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಜನಪರ ಯಾತ್ರೆ

By

Published : Oct 31, 2022, 3:49 PM IST

ಕಾರವಾರ: ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದೆ. ಹೀಗಿರುವಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿರುವ 'ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ' ಸ್ಥಾಪನೆಯನ್ನು ಸರ್ಕಾರ ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಯತ್ನದಲ್ಲಿದೆ ಎಂಬ ಆರೋಪವೂ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ಇಂದು ಹೊನ್ನಾವರದಿಂದ ಕುಮಟಾದವರೆಗೆ ಬೃಹತ್ ಪಾದಯಾತ್ರೆ ನಡೆಯಿತು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಜನಪರ ಯಾತ್ರೆ

ಇದನ್ನೂ ಓದಿ:ಉತ್ತರಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಆರೋಗ್ಯ ಸಚಿವರಿಂದ ಮಹತ್ವದ ಸಭೆ

ಜೆಡಿಎಸ್ ನಾಯಕ ಸೂರಜ್ ಸೋನಿ ನೇತೃತ್ವದಲ್ಲಿ ಹೊನ್ನಾವರದ ಶರಾವತಿ ಸರ್ಕಲ್ ಬಳಿಯಿಂದ ಕುಮಟಾವರೆಗೆ ನಡೆದ ಸುಮಾರು 25 ಕಿ.ಮೀ ಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸಿಗೆ ತಣ್ಣೀರು: ಸರ್ಕಾರದ ವಿರುದ್ಧ ಉತ್ತರ ಕನ್ನಡಿಗರ ಆಕ್ರೋಶ

ಸೂರಜ್ ಸೋನಿ ಮಾತನಾಡಿ, 'ಜಿಲ್ಲೆಗೆ ಅತ್ಯಗತ್ಯವಿರುವ ಆಸ್ಪತ್ರೆ ಮಂಜೂರಿಗೆ ಸರ್ಕಾರ ವಿಳಂಬ ಮಾಡುವ ಮೂಲಕ ಬೇಡಿಕೆಯನ್ನು ಚುನಾವಣೆವರೆಗೂ ಕೊಂಡೊಯ್ಯುವ ತಂತ್ರ ನಡೆಸಿದೆ. ಪರೇಶ್​ ಮೇಸ್ತಾ ಸಾವಿನ ಪ್ರಕರಣದಂತೆ ಇದನ್ನೂ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ' ಎಂದು ಆರೋಪಿಸಿದರು.

ಇದನ್ನೂ ಓದಿ:ಉತ್ತರ ಕನ್ನಡ ಜನತೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟಕ್ಕೆ ಹೆಚ್​​ಡಿಕೆ ಬೆಂಬಲ

ABOUT THE AUTHOR

...view details