ಭಟ್ಕಳ(ಉತ್ತರ ಕನ್ನಡ):ಮೊಗೇರ ಸಮಾಜದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ವ್ಯಕ್ತಿಯೊಬ್ಬ ನಗರದ ಶಂಸುದ್ದಿನ್ ಸರ್ಕಲ್ ಏರಿ ವಿಷ ಸೇವಿಸಲು ಯತ್ನಿಸಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜದವರಿಗೆ ನೀಡುತ್ತಿರುವ ಪ್ರವರ್ಗ 1ರ ಪ್ರಮಾಣ ಪತ್ರ ಸ್ಥಗಿತಗೊಳಿಸಿ, ಈ ಹಿಂದಿನಂತೆ ಸರ್ಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಮೊಗೇರ ಸಮಾಜದ ವತಿಯಿಂದ ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಮಿನಿ ವಿಧಾನಸೌಧದ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಎಸ್ಸಿ ಪ್ರಮಾಣ ಪತ್ರ ನೀಡುವಂತೆ ಆಗ್ರಹ: ಶಂಸುದ್ದಿನ್ ಸರ್ಕಲ್ ಏರಿ ವ್ಯಕ್ತಿ ವಿಷ ಸೇವಿಸಲು ಯತ್ನ! - Massive protest march from Mogera society in Bhatkal
ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಮೊಗೇರ ಸಮಾಜದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ವ್ಯಕ್ತಿಯೊಬ್ಬ ಶಂಸುದ್ದಿನ್ ಸರ್ಕಲ್ ಏರಿ ವಿಷ ಸೇವಿಸಲು ಯತ್ನಿಸಿದ ಘಟನೆ ನಡೆದಿದೆ.
ಶಂಸುದ್ದಿನ್ ಸರ್ಕಲ್ ಏರಿ ವ್ಯಕ್ತಿ ವಿಷ ಸೇವಿಸಲು ಯತ್ನ
ಈ ಹಿನ್ನೆಲೆ ವೆಂಕಟಾಪುರದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ಭಟ್ಕಳ ಶಂಸುದ್ದಿನ್ ಸರ್ಕಲ್ ತಲುಪುತ್ತಿದ್ದಂತೆ ತಾಲೂಕಿನ ಗಾಂಧಿ ನಗರದ ನಿವಾಸಿ ಉಮೇಶ ಮೊಗೇರ ಎಂಬಾತ ಶಂಸುದ್ದಿನ್ ಸರ್ಕಲ್ ಏರಿ ವಿಷ ಸೇವಿಸಲು ಯತ್ನಿಸಿದ್ದಾನೆ. ನಂತರ ಇಬ್ಬರು ಯುವಕರು ಸರ್ಕಲ್ ಏರಿ ಆತನ ಕೈಯಲ್ಲಿದ್ದ ವಿಷದ ಬಾಟಲ್ ಕಸಿದುಕೊಂಡರು. ನಂತರ ಪೊಲೀಸ್ ಇಲಾಖೆ ಹಾಗೂ ಸಮಾಜದ ಮುಖಂಡರು ಆತನ ಮನವೊಲಿಸಿ ಶಂಸುದ್ದಿನ್ ಸರ್ಕಲ್ ನಿಂದ ಕೆಳಗೆ ಇಳಿಸಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯದಿದ್ದಾರೆ.
ಇದನ್ನೂ ಓದಿ:ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಯೋಗಿ ಆದಿತ್ಯನಾಥ್ಗೆ ನೋಟಿಸ್ ಜಾರಿ