ಕಾರವಾರ:ಜಿಂಕೆ ಕೊಂಬು ಸಾಗಣೆ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಅಂಕೋಲಾದ ಮಾಸ್ತಿಕಟ್ಟಾ ಹೆದ್ದಾರಿಯಲ್ಲಿ ನಡೆದಿದೆ. ಹಳಿಯಾಳದ ಶೌಕತ್ ಸಾಬ್, ಕಲ್ಲೇಶ್ವರ ಗ್ರಾಮದ ಪ್ರಸಾದ ದೇಸಾಯಿ, ಸೂರಜ್ ಭಂಡಾರಿ, ಸಂದೀಪ ಭಂಡಾರಿ, ಬಂಧಿತ ಆರೋಪಿಗಳು.
ಕಾರವಾರ - ಜಿಂಕೆ ಕೊಂಬು ಸಾಗಣೆ: ನಾಲ್ವರ ಬಂಧನ
ಕಾರವಾರದಲ್ಲಿ ಜಿಂಕೆ ಕೊಂಬು ಸಾಗಣೆ ಮಾಡುತ್ತಿದ್ದ, ನಾಲ್ವರು ಆರೋಪಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.
ನಾಲ್ವರು ಆರೋಪಿಗಳ ಬಂಧನ
ಎರಡು ಜಿಂಕೆ ಕೊಂಬುಗಳನ್ನು ಕಾರಿನಲ್ಲಿ ಸಾಗಣೆ ಮಾಡುತ್ತಿದ್ದಾಗ ಅಂಕೋಲಾದ ಮಾಸ್ತಿಕಟ್ಟಾ ಬಳಿ ಹೆದ್ದಾರಿಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಪಾಸಣೆ ನಡೆಸಿದ ಪೊಲೀಸರು ಕೊಂಬು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ತಾಯಿಗೆ ನಿಂದಿಸಿದ್ದಕ್ಕೆ ಸಿಟ್ಟು.. ಹುಬ್ಬಳ್ಳಿಯಲ್ಲಿ ಯುವಕನ ಕೊಲೆಗೆ ಯತ್ನಿಸಿದ 9 ಜನರ ಗುಂಪು