ಶಿರಸಿ: ನರಿ ಹಾಗೂ ನಾಯಿಗಳ ದಾಳಿಯಿಂದ ಜಿಂಕೆಯೊಂದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಸಮೀಪದ ನಗರಿ ಬಳಿ ನಡೆದಿದೆ.
ನರಿ, ನಾಯಿಗಳ ದಾಳಿಗೆ ಜೋಯಿಡಾ ಬಳಿ ಜಿಂಕೆ ಬಲಿ - ಉತ್ತರಕನ್ನಡ ಜಿಲ್ಲಾ ಸುದ್ದಿ
ನಗರದ ಬಳಿಯ ಜಮೀನು ಹತ್ತಿರ ನರಿ ಹಾಗೂ ನಾಯಿಗಳ ದಾಳಿಗೆ ತುತ್ತಾಗಿ ಜಿಂಕೆಯೊಂದು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಸಮೀಪದ ನಗರಿ ಬಳಿ ನಡೆದಿದೆ.
ನರಿ ನಾಯಿಗಳ ದಾಳಿಗೆ ಜಿಂಕೆ ಸಾವು
ನಗರಿ ಬಳಿಯ ಹೊಲದಲ್ಲಿ ಜಿಂಕೆಯೊಂದು ಚಡಪಡಿಸುತ್ತಿದ್ದ ಶಬ್ದ ಕೇಳಿಸಿತ್ತು. ಆಗ ಹತ್ತಿರ ಹೋಗಿ ನೋಡಿದಾಗ ಜಿಂಕೆ ಹೊಲದ ಬದುವಿನಲ್ಲಿ ಬಿದ್ದು ಸಾವನ್ನಪ್ಪಿರುವುದು ತಿಳಿದಿದೆ. ಜೋಯಿಡಾ ವಲಯ ಅರಣ್ಯಾಧಿಕಾರಿ ಮಹಿಮ ಜನ್ನು ಸ್ಥಳಕ್ಕೆ ಭೇಟಿ ನೀಡಿ, ಪಶುವೈದ್ಯಾಧಿಕಾರಿಗಳಿಂದ ಜಿಂಕೆಯ ಮೃತದೇಹ ಪರೀಕ್ಷೆ ನಡೆಸಿದರು.
ಕಾಡಿನ ನರಿಗಳು ಹಾಗೂ ನಾಯಿಗಳ ದಾಳಿಯಿಂದ ಸಾವನ್ನಪ್ಪಿದೆ ಎಂದು ಪಶುವೈಧ್ಯಾಧಿಕಾರಿ ಲಮಾಣಿ ತಿಳಿಸಿದ್ದಾರೆ. ಇಲಾಖೆಯ ನಿಯಮದಂತೆ ಜಿಂಕೆಯ ಶವಸಂಸ್ಕಾರ ನಡೆಸಲಾಗಿದೆ.