ಕಾರವಾರ: ದೀಪಾವಳಿ ಹಬ್ಬ ಆಚರಣೆ ರೈತರಿಗೆ ವಿಶೇಷವಾದದ್ದು. ಬಲೀಂದ್ರ ಪೂಜೆ ಜೊತೆಗೆ ತಮ್ಮ ಗೋವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಶುಕ್ರವಾರ ಮಳೆ ನಡುವೆಯೂ ಉತ್ತರಕನ್ನಡ ಜಿಲ್ಲೆಯಾದ್ಯಂತ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ದೀಪಾವಳಿ ಹಿನ್ನೆಲೆ ಬಲೀಂದ್ರನನ್ನು ತಂದು ವಿಶೇಷ ಪೂಜೆ ಸಲ್ಲಿಸಿದ ರೈತರು ಬಲಿಪಾಡ್ಯ ದಿನ ಗೋವುಗಳನ್ನು ಶೃಂಗರಿಸಿ, ರೊಟ್ಟಿ, ಪತ್ತೆ ತೆನೆ ಎಲೆಗಳಿಂದ ಮಾಡಿದ ದಂಡೆಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸುರಿದ ಮಳೆ ನಡುವೆಯೂ ಅವುಗಳನ್ನು ಚೌಲೂ, ಬಲೂನ್, ಬಾಸಿಂಗ ಸೇರಿದಂತೆ ಬಣ್ಣದ ಕಾಗದ ಹೂವುಗಳಿಂದ ಶೃಂಗರಿಸಿ ಬೆದರಿಸಲಾಯಿತು.