ಶಿರಸಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯುವಕ ಸಾವಿಗೀಡಾದ ಘಟನೆ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ.
ವೆಲ್ಡಿಂಗ್ ಕೆಲಸ ಮಾಡುವಾಗ ಶಾರ್ಟ್ ಸರ್ಕ್ಯೂಟ್: ಯುವಕ ಸಾವು - ಶಿರಸಿಯಲ್ಲಿ ಯುವಕ ಸಾವು
ಮುಂಡಗೋಡಿನ ಕಿಲ್ಲೆ ಓಣಿಯ ಹಜರತಲಿ ಹಸನಮಿಯಾ ಆಡೂರ (25) ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿ.
ವೆಲ್ಡಿಂಗ್ ಕೆಲಸ ಮಾಡುವಾಗ ಶಾರ್ಟ್ ಸರ್ಕ್ಯೂಟ್
ಮುಂಡಗೋಡಿನ ಕಿಲ್ಲೆ ಓಣಿಯ ಹಜರತಲಿ ಹಸನಮಿಯಾ ಆಡೂರ (25) ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿ. ಟಿಬೇಟಿಯನ್ ಕಾಲೋನಿ 3 ರ ಕಟ್ಟಡವೊಂದರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಶಾಕ್ ಹೊಡೆದಿದೆ.
ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.