ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ಹಾಸನ ಮೂಲದ ಕೆ.ಎಸ್.ಆರ್.ಟಿ.ಸಿ ಚಾಲಕನ ಮೃತದೇಹ ಪತ್ತೆ - Hassan driver Dead body found in Bhatkal

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹಾಸನ ಮೂಲದ ಬಸ್​ ಡ್ರೈವರ್​ ಮೃತದೇಹ ಪತ್ತೆಯಾಗಿದೆ. ಆದರೆ ಈತ ಹಾಸನದಿಂದ ಭಟ್ಕಳಕ್ಕೆ ಯಾವ ಉದೇಶಕ್ಕಾಗಿ ಬಂದಿದ್ದರು, ಬಳಿಕ ಏನಾಗಿದೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

dead-body
ಮೃತ ದೇಹ

By

Published : Oct 13, 2020, 4:53 PM IST

Updated : Oct 13, 2020, 5:13 PM IST

ಭಟ್ಕಳ:ತಾಲೂಕಿನ ಹಳೇ ಕುಬೇರ ಹೋಟೆಲ್​ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನ ಮೃತದೇಹ ಪತ್ತೆಯಾಗಿದೆ.

ನಾಗರಾಜ್ ಮೃತ ಕೆಎಸ್​​ಆರ್​ಟಿಸಿ ಚಾಲಕ, ಇವರು ಹನುಮಂತಪುರ ಹಾಸನ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ. ಗುರುತಿನ ಚೀಟಿಯಲ್ಲಿ ಹಾಸನ ಮೂಲದ ಕೆ.ಎಸ್.ಆರ್.ಟಿ.ಸಿ ಚಾಲಕ ಎಂಬ ವಿಳಾಸ ಇದೆ.

ಹಾಸನ ಮೂಲದ ಕೆ.ಎಸ್.ಆರ್.ಟಿ.ಸಿ ಚಾಲಕನ ಮೃತದೇಹ ಪತ್ತೆಯಾದ ಸ್ಥಳ
ಮೃತರ ಗುರುತಿನ ಚೀಟಿ

ಆದರೆ ಇವರು ಹಾಸನದಿಂದ ಭಟ್ಕಳಕ್ಕೆ ಯಾವ ಉದೇಶಕ್ಕಾಗಿ ಬಂದಿದ್ದರು, ಬಳಿಕ ಏನಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಮೃತದೇಹವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Last Updated : Oct 13, 2020, 5:13 PM IST

ABOUT THE AUTHOR

...view details