ಕಾರವಾರ/ಶಿವಮೊಗ್ಗ:ಬಯಲಾಗಿರುವ ಸಿಡಿ ಸತ್ಯವಲ್ಲ. ಯಾರೋ ದುರುದ್ದೇಶದಿಂದ ಹೀಗೆ ಮಾಡಿರುವುದಾಗಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದನ್ನು ಉಪಮುಖ್ಯಮಂತ್ರಿ ಅಶ್ವತ್ಥ್ನಾರಾಯಣ ಸಮರ್ಥಿಸಿಕೊಂಡರು.
ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಯನ್ನೇ ಪುನರುಚ್ಚಸಿದ್ರು ಡಿಸಿಎಂ ಅಶ್ವತ್ಥ್ನಾರಾಯಣ! - Ramesh Jarkiholi latest news
ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಡಿಸಿಎಂ ಅಶ್ವತ್ಥ್ನಾರಾಯಣ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ ಅವರೇ ಇದು ಸತ್ಯವಲ್ಲ. ಸುಳ್ಳು ಎಂದು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನೇ ನಾನು ಸಹ ಪುನರುಚ್ಚಾರಣೆ ಮಾಡುತ್ತೇನೆ. ಈ ಬಗ್ಗೆ ದೂರು ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
![ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಯನ್ನೇ ಪುನರುಚ್ಚಸಿದ್ರು ಡಿಸಿಎಂ ಅಶ್ವತ್ಥ್ನಾರಾಯಣ! Ashwath Narayan](https://etvbharatimages.akamaized.net/etvbharat/prod-images/768-512-10850091-thumbnail-3x2-chaii.jpg)
ಕುಮಟಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಪ್ರತಿಕ್ರಿಯಿಸಿದರು. ಈ ಬಗ್ಗೆ ದೂರು ದಾಖಲಾಗಿದ್ದು, ಪರಿಶೀಲನೆ ನಡೆಸಿ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ರಾಜೀನಾಮೆ ಪಡೆಯಲಾಗುತ್ತದೆಯೇ ಎಂದು ಪ್ರಶ್ನಿಸಿದಾಗ ಅವರೇ ಸತ್ಯವಲ್ಲ ಎಂದು ಹೇಳುತ್ತಿದ್ದಾರಲ್ಲಾ ಎಂದರು.
ಮತ್ತೊಂದೆಡೆ ಶಿವಮೊಗ್ಗದಲ್ಲೂ ಇದೇ ವಿಷಯ ಕುರಿತು ಮಾತನಾಡಿದ ಡಿಸಿಎಂ, ದುರುದ್ದೇಶದ ಪಿತೂರಿ ಕುತಂತ್ರದಿಂದ ಬ್ಲಾಕ್ಮೇಲ್, ಹನಿಟ್ರ್ಯಾಪ್ ಮಾಡುವುದಿದೆ. ಹಾಗಾಗಿ ಇದು ಎಷ್ಟರ ಸತ್ಯ ಎನ್ನುವುದು ಕಷ್ಟವಾಗಿದೆ. ಎಲ್ಲವನ್ನೂ ಕಾಲವೇ ತಿಳಿಸುತ್ತದೆ. ಯಾರ ಕುತಂತ್ರ ಇದೆಯೋ ಅಥವಾ ರಾಜಕೀಯ ದುರುದ್ದೇಶ ಇದೆಯೋ ಗೊತ್ತಿಲ್ಲ ಎಂದು ಹೇಳಿದರು.