ಭಟ್ಕಳ:ಕೊರೊನಾ ನಿಯಂತ್ರಣ ಮಾಡಲು ತಳಮಟ್ಟದ ಅಧಿಕಾರಿಗಳು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂದ ಸಾಧ್ಯವಾಗಿದ್ದು, ಇನ್ನು ಮುಂದೆ ಇವರ ಜವಾಬ್ದಾರಿಯೂ ಹೆಚ್ಚಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ ಹೇಳಿದರು.
ಅವರು ಇಲ್ಲಿನ ಬಂದರು ರಸ್ತೆಯಲ್ಲಿರುವ ಕಮಲಾವತಿ & ಶಾನಭಾಗ ಸಭಾಭವನದಲ್ಲಿ ಕೋವಿಡ್-19 ಸಂಬಂಧಿಸಿದಂತೆ ಕಾವಲು ಸಮಿತಿಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೋಂಕಿತರ ಚಿಕಿತ್ಸೆಗೆ ಕಾರವಾರದಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ವ್ಯವಸ್ಥೆ ಇದ್ದು, ತಾಲೂಕಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿನ ತಪ್ಪು ಕಲ್ಪನೆ ಹೋಗಲಾಡಿಸಿ ಆರೋಗ್ಯ ಸರ್ವೆ ಮಾಡಿ ಸಮುದಾಯಕ್ಕೆ ಹರಡದಂತೆ ಎಚ್ಚರಿಕೆ ವಹಿಸುವುದರೊಂದಿಗೆ ಕಾನೂನು ಮೀರಿದರೆ ಪ್ರಕರಣ ದಾಖಲು ಮಾಡುವ ಕೆಲಸ ಇನ್ನು ಮುಂದಿನ ದಿನದಲ್ಲಿ ನಡೆಯಬೇಕು ಎಂದು ಸೂಚನೆ ನೀಡಿದರು.
80 ದಿನಗಳ ಲಾಕ್ಡೌನ್ನಲ್ಲಿ ಕೊರೊನಾ ಹತೋಟಿಗೆ ತರಲು ಎಲ್ಲ ತಳಮಟ್ಟದ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘಿಸಿ ಅವರ ಬೆನ್ನು ತಟ್ಟಿ ಅವರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ. ಜಿಲ್ಲಾಧಿಕಾರಿಯಾಗಿ ನಾನು ಸಾಮಾನ್ಯವಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ತಾಲೂಕು ಮಟ್ಟದ ಮೇಲಧಿಕಾರಿಗಳ ಗಮನಕ್ಕೆ ಸಲಹೆ, ಸೂಚನೆ ಸಹಿತ ಆದೇಶ ನೀಡಲಿದ್ದೇನೆ. ಅದರಂತೆ ತಳಮಟ್ಟದ ಅಧಿಕಾರಿಗಳು ಹಾಗೂ ಇನ್ನಿತರ ಕಾರ್ಯವೂ ಈ ಅವಧಿಯಲ್ಲಿ ಪ್ರಮುಖವಾಗಿದೆ. ಈ ತರಬೇತಿ ಕಾರ್ಯವು ಕೇವಲ ನಮ್ಮ ಸೂಚನೆಗೆ ಮಾತ್ರ ಸೀಮಿತವಾಗದೇ ಇದರಲ್ಲಿ ನಿಮ್ಮ ಸಲಹೆ ಕೂಡಾ ಬೇಕು ಎಂದರು.
ಹೆಚ್ಚಾಗಬೇಕಿದೆ ಸರ್ವೇ ಕಾರ್ಯ: