ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ಲಾಕ್ ಡೌನ್ ಮತ್ತಷ್ಟು ಬಿಗಿ: ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು - ಭಟ್ಕಳ

ಭಟ್ಕಳದಲ್ಲಿ ಪ್ರತಿದಿನ ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಲಾಕ್‍ಡೌನ್ ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದ್ದಾರೆ.

By

Published : May 12, 2020, 11:40 AM IST

Updated : May 12, 2020, 6:59 PM IST

ಭಟ್ಕಳ (ಉತ್ತರ ಕನ್ನಡ): ತಾಲೂಕಾಡಳಿತ ಹಿಂದೆ ನೀಡಿದ ಪಾಸ್‍ಗಳಲ್ಲಿ ದಿನಸಿ, ತರಕಾರಿ, ಮೆಡಿಸಿನ್, ಹಾಲನ್ನು ಅತಿ ಅಗತ್ಯ ವಸ್ತುಗಳೆಂದು ಪರಿಗಣಿಸಿ ಮುಂದಿನ 3-4 ದಿನಗಳವರೆಗೆ ಚಾಲ್ತಿಯಲ್ಲಿರಲಿದೆ ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.

ಅವರು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಟ್ಕಳದಲ್ಲಿ ಪ್ರತಿದಿನ ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಲಾಕ್‍ಡೌನ್ ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದರು.

ಇಷ್ಟು ದಿನ ನೀಡಿದ ಎಲ್ಲಾ ಪಾಸ್‍ಗಳು ರದ್ದಾಗಲಿವೆ. ಮುಂದಿನ ದಿನಗಳಲ್ಲಿ ಭಟ್ಕಳ ಪಟ್ಟಣವನ್ನು 5 ಭಾಗಗಳಾಗಿ ವಿಂಗಡನೆ ಮಾಡಲಾಗುವುದು. ಮದೀನಾ ಕಾಲನಿ, ನವಾಯತ್ ಕಾಲನಿ, ಜಾಲಿ ಕ್ರಾಸ್, ಸುಲ್ತಾನ್ ಸ್ಟ್ರೀಟ್, ಭಟ್ಕಳ ಸರ್ಕಲ್ ಸೇರಿ ಅಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ಒಂದು ದಾರಿಯನ್ನು ಇಡಲಾಗುವುದು. ಅಲ್ಲದೆ ಅಲ್ಲೇ ಒಂದು ಸಹಾಯವಾಣಿಯನ್ನು ತೆರೆಯಲಾಗುತ್ತದೆ. ಇನ್ನು ಮುಂದೆ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಸರಬರಾಜಿಗೆ ಜನಸಂಖ್ಯೆಗೆ ಅನುಗುಣವಾಗಿ ವಾಹನದ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ 4 ಗಂಟೆಗಳಿಗೊಮ್ಮೆ ವಾಹನ ನಿಗದಿತ ಸ್ಥಳಗಳಿಗೆ ತೆರಳಿ ಮನೆ, ಮನೆಗಳಲ್ಲಿ ಅಗತ್ಯ ವಸ್ತುಗಳನ್ನು ಪೊರೈಸುತ್ತದೆ ಎಂದು ಹೇಳಿದರು.

ಕೋವಿಡ್-19 ತಡೆಗಟ್ಟವುದು ಸಾಧ್ಯವಿದೆ. ಹಾಗಾಗಿ ಇಷ್ಟೆಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆಡಳಿತದ ಮೇಲೆ ನಂಬಿಕೆ ಇಡಿ, ಸುಳ್ಳು ಸುದ್ದಿಗಳನ್ನು ಹರಡಬೇಡಿ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದವರ ಮೇಲೆ ಈಗಾಗಲೇ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗಾಧಿಕಾರಿ ಭರತ್ ಎಸ್, ಡಿವೈಎಸ್‍ಪಿ ಗೌತಮ್ ಕೆಸಿ, ಸಿಪಿಐ ರಾಮಚಂದ್ರ ನಾಯ್ಕ, ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ, ತಹಶೀಲ್ದಾರ್​ ರವಿಚಂದ್ರ, ಪಿಎಸ್‍ಐ ಎಚ್. ಕುಡಗಂಟಿ ಉಪಸ್ಥಿತರಿದ್ದರು.

Last Updated : May 12, 2020, 6:59 PM IST

ABOUT THE AUTHOR

...view details