ಕರ್ನಾಟಕ

karnataka

By

Published : May 13, 2020, 7:27 PM IST

ETV Bharat / state

ಕುಮಟಾದ ಯುವಕ ಯಾರ ಸಂಪರ್ಕಕ್ಕೂ ಬಂದಿಲ್ಲ: ಭಯ ಬೇಡ ಎಂದ ಡಿಸಿ

ಮೇ 5 ರಂದು ಮಹಾರಾಷ್ಟ್ರದ ರತ್ನಗಿರಿಯಿಂದ ಮೀನಿನ ಲಾರಿ ಮೂಲಕ ಬಂದ ಯುವಕ ಯಾರ ಸಂಪರ್ಕಕ್ಕೂ ಬಂದಿಲ್ಲ, ಆತನನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ತಿಳಿಸಿದ್ದಾರೆ.

DC Harish kumar
ಡಿಸಿ ಹರೀಶಕುಮಾರ್

ಕಾರವಾರ: ಕೋವಿಡ್-19 ಧೃಡಪಟ್ಟಿರುವ ಕುಮಟಾದ 26 ವರ್ಷದ ಯುವಕ ಯಾರ ಸಂಪರ್ಕಕ್ಕೂ ಬಂದಿಲ್ಲ.‌ ಮಹಾರಾಷ್ಟ್ರದಿಂದ ಮೀನಿನ ಲಾರಿ ಮೂಲಕ ಬಂದಾಗ ಹಿರೇಗುತ್ತಿ ಚೆಕ್ ಪೋಸ್ಟ್ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ನೇರವಾಗಿ ಸರ್ಕಾರಿ ಕ್ವಾರಂಟೈನ್​ಗೆ ಕಳುಹಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿ ಡಾ. ಹರೀಶಕುಮಾರ್

ಕುಮಟಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಹೊಸ ಪ್ರಕರಣಗಳಲ್ಲಿ ಸೋಂಕು ಇರುವುದು ಧೃಡಪಟ್ಟಿದೆ. ಭಟ್ಕಳದಲ್ಲಿ ಈಗಾಗಲೇ ಧೃಡಪಟ್ಟಿರುವ ಮಹಿಳೆಯ ಮಗಳಿಗೆ ಸೋಂಕು ಇರುವುದು ಪತ್ತೆಯಾಗಿದೆ. ಈಗಾಗಲೇ ಅವಳನ್ನು ಕ್ವಾರಂಟೈನ್​ನಲ್ಲಿ ಇರಿಸಿದ್ದರಿಂದ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಇನ್ನು ಮೇ 5 ರಂದು ಯುವಕ ಮಹಾರಾಷ್ಟ್ರದ ರತ್ನಗಿರಿಯಿಂದ ಮೀನಿನ ಲಾರಿ ಮೂಲಕ ಆಗಮಿಸುತ್ತಿರುವಾಗ ಕುಮಟಾದ ಹಿರೇಗುತ್ತಿ ಚೆಕ್ ಪೋಸ್ಟ್ ನಲ್ಲಿ ತಡೆದು ಸರ್ಕಾರಿ ಕ್ವಾರಂಟೈನ್​ಗೆ ಶಿಪ್ಟ್ ಮಾಡಲಾಗಿತ್ತು. ಇದರಿಂದ ಈತ ಬೇರೆ ಯಾರ ಸಂಪರ್ಕಕ್ಕೂ ಬಂದಿಲ್ಲ. ಇನ್ನು ಡ್ರೈವರ್ ಬಂದ ಕೆಲಸ ಮುಗಿಸಿಕೊಂಡು ವಾಪಸ್ಸ್ ಆಗಿದ್ದಾನೆ. ಇದರಿಂದ ಪಟ್ಟಣದ ಜನತೆ ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಇನ್ನು ಮುಂದೆ ಗಂಟಲು ದ್ರವ ವರದಿಯನ್ನು ಶೀಘ್ರವಾಗಿ ನಡೆಸಲು ಹತ್ತಾರು ಜನರ ಮಾದರಿಗಳನ್ನು ಏಕಕಾಲದಲ್ಲಿ ಸಂಗ್ರಹಿಸಲಾಗುವುದು. ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಶಿರಸಿ, ಹಳಿಯಾಳ ಹಾಗೂ ಭಟ್ಕಳದಲ್ಲಿ ತಲಾ 100 ಬೆಡ್ ಹಾಸಿಗೆಯ ಪ್ರತ್ಯೇಕ ಆಸ್ಪತ್ರೆ ತೆರೆಯಲಾಗುವುದು ಎಂದು ಹೇಳಿದರು.

ಹೊರ ದೇಶ ರಾಜ್ಯದಿಂದ ಬಂದವರು ಹೊಟೇಲ್ ಅಥವಾ ಸರ್ಕಾರಿ ಕ್ವಾರಂಟೈನ್​ನಲ್ಲಿ ಇರುವುದು ಕಡ್ಡಾಯ. ಮುಂದಿನ ದಿನಗಳಲ್ಲಿ ತೀವ್ರ ತೊಂದರೆಗೊಳಗಾದವರು ಮತ್ತು ವಯುಸ್ಸಾದವರಿಗೆ ಮಾತ್ರ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುವುದು. ಉಳಿದವರಿಗೆ ಆಯಾ ತಾಲೂಕು ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ABOUT THE AUTHOR

...view details