ಕಾರವಾರ:ನವರಾತ್ರಿ ಅಂದಾಕ್ಷಣ ಕರಾವಳಿ ನಗರಿ ಕಾರವಾರದ ಜನತೆಗೆ ಮೊದಲು ನೆನಪಾಗೋದು ದಾಂಡಿಯಾ. ಕೇವಲ ಗುಜರಾತ್, ಮಹಾರಾಷ್ಟ್ರ ಭಾಗದಲ್ಲಿ ಆಚರಣೆಯಲ್ಲಿರುವ ಈ ದಾಂಡಿಯಾ, ಗರ್ಬಾ ನೃತ್ಯವನ್ನು ಕಾರವಾರಿಗರೂ ಸಹ ಆಚರಿಸಿಕೊಂಡು ಬರುತ್ತಿರುವುದು ವಿಶೇಷ. ನವರಾತ್ರಿಯ ಒಂಭತ್ತು ದಿನಗಳ ಕಾಲವೂ ನಗರದ ವಿವಿಧೆಡೆ ದಾಂಡಿಯಾ ಆಯೋಜಿಸುವ ಮೂಲಕ ಜನರು ಸಂಭ್ರಮದಿಂದ ಹಬ್ಬವನ್ನು ಆಚರಿಸಿ ಗಮನ ಸೆಳೆಯುತ್ತಿದ್ದಾರೆ.
ಉತ್ಸವದ ನಿಮಿತ್ತ ದಾಂಡಿಯ ಹಾಗೂ ಗರ್ಬಾ ನೃತ್ಯವನ್ನು ನಿತ್ಯವೂ ಆಡುವ ಮೂಲಕ ಜನರು ಸಂಭ್ರಮಿಸ ತೊಡಗಿದ್ದಾರೆ. ಪ್ರತಿ ವರ್ಷ ನವರಾತ್ರಿ ಬಂದಾಗ ನಗರದ ವಿವಿಧೆಡೆ ರಾತ್ರಿ ವೇಳೆ ದಾಂಡಿಯಾ ನೃತ್ಯವನ್ನು ವಿವಿಧ ಸಂಘಟನೆಗಳಿಂದ ಆಯೋಜಿಸಲಾಗುತ್ತದೆ. ಕಾರವಾರದ ಬಹುತೇಕ ಎಲ್ಲಾ ವಾರ್ಡ್ಗಳಲ್ಲಿ ಆಯೋಜಕರು ದಾಂಡಿಯಾ ನೃತ್ಯವನ್ನು ಆಯೋಜಿಸುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸಂಭ್ರಮಿಸುವುದು ವಿಶೇಷವಾಗಿದೆ.
ಕೇವಲ ರಾಜಸ್ಥಾನ, ಗುಜರಾತ್, ಪಂಜಾಬ್ನಂತಹ ಕೆಲವೇ ರಾಜ್ಯಗಳಿಗೆ ಸೀಮಿತ ಎನ್ನಲಾದ ದಾಂಡಿಯಾ, ಗರ್ಬಾ ನೃತ್ಯವನ್ನು ಕಳೆದ ಕೆಲ ವರ್ಷದಿಂದ ಕಾರವಾರದ ಜನ ತಮ್ಮದೇ ಸಂಪ್ರದಾಯದಂತೆ ವಿಜ್ರಂಭಣೆಯಿಂದ ಆಚರಿಸುತ್ತಾ ಬರುತ್ತಿದ್ದಾರೆ. ನಗರದ ದೇವಳಿವಾಡದಲ್ಲಿ ಕಳೆದ 16 ವರ್ಷಗಳಿಂದ ದಾಂಡಿಯಾ ಆಯೋಜಿಸಿಕೊಂಡು ಬರುತ್ತಿದ್ದು ಈ ವರ್ಷವೂ ಸಹ ಅದ್ದೂರಿಯಾಗಿ ನಡೆಯುತ್ತಿದೆ.