ಕರ್ನಾಟಕ

karnataka

ETV Bharat / state

ಲಾಕ್​​​​ಡೌನ್​​​ ಬಳಿಕ ಪ್ರವಾಸಿಗರಿಗೆ ದಾಂಡೇಲಿ ಮುಕ್ತ.. ದಟ್ಟ ಕಾನನಕ್ಕೆ ಬಂದಿದೆ ಮರುಜೀವ - Uttar Kannada tourist site

ಈಗಾಗಲೇ ದಾಂಡೇಲಿ, ಹಳಿಯಾಳ ಜೋಯ್ಡಾ ತಾಲೂಕುಗಳ ಬಹುತೇಕ ರೆಸಾರ್ಟ್​ಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ದೋಣಿ ವಿಹಾರಕ್ಕೂ ಅವರದ್ದೇ ಫ್ಯಾಮಿಲಿ ಇದ್ದರೆ ಮಾತ್ರವೇ ಅವಕಾಶ ಕಲ್ಪಿಸಿ ಕೊಡುತ್ತಿದ್ದಾರೆ..

Dandeli Tourism reopens after lock down
ಲಾಕ್​​​​ಡೌನ್​​​ ಬಳಿಕ ಪ್ರವಾಸಿಗರಿಗೆ ಮುಕ್ತವಾದ ದಾಂಡೇಲಿ: ದಟ್ಟ ಕಾನನಕ್ಕೆ ಬಂದಿದೆ ಜೀವಕಳೆ

By

Published : Sep 18, 2020, 3:32 PM IST

ಶಿರಸಿ (ಉತ್ತರ ಕನ್ನಡ) :ಕೋವಿಡ್​​​​​ ಲಾಕ್​​​ಡೌನ್​ನಿಂದಾಗಿ ಬಂದ್‌ ಆಗಿದ್ದ ಪ್ರವಾಸೋದ್ಯಮ ಕ್ಷೇತ್ರ ಮತ್ತೆ ಸುಸ್ಥಿತಿಯತ್ತ ಮರಳುತ್ತಿದೆ. ಅದರಲ್ಲೂ ಪ್ರವಾಸೋದ್ಯವನ್ನೇ ನೆಚ್ಚಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಬಂದ್ ಆಗಿದ್ದ ರೆಸಾರ್ಟ್-ಹೋಮ್‌ಸ್ಟೇಗಳು ಪ್ರವಾಸಿಗರನ್ನು ಮತ್ತೆ ಕೈಬೀಸಿ ಕರೆಯುತ್ತಿವೆ. ಪ್ರವಾಸಿಗರು ಕೂಡ ಪ್ರವಾಸಿ ತಾಣಗಳತ್ತ ಬರುತ್ತಿದ್ದಾರೆ.

ಇದೀಗ ದಾಂಡೇಲಿ ಕಾನನದಲ್ಲಿನ ಬಹುತೇಕ ರೆಸಾರ್ಟ್​​ಗಳು ಪ್ರವಾಸಿಗರಿಂದ ತುಂಬಿದ್ದು, ಜನರು ಮತ್ತೆ ಪ್ರಕೃತಿಯ ಸವಿ ಸವಿಯೋದಕ್ಕೆ ಮುಂದಾಗಿದ್ದಾರೆ. ಕೋವಿಡ್ ಕಾರಣದಿಂದ ಸಾಕಷ್ಟು ದಿನದಿಂದ ಮನೆಯಲ್ಲೇ ಕುಳಿತಿದ್ದ ಜನತೆ, ತುಸು ವಿರಾಮಕ್ಕಾಗಿ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ.

ಲಾಕ್​​​​ಡೌನ್​​​ ಬಳಿಕ ಪ್ರವಾಸಿಗರಿಗೆ ದಾಂಡೇಲಿ ಮುಕ್ತ

ಈಗಾಗಲೇ ದಾಂಡೇಲಿ, ಹಳಿಯಾಳ ಜೋಯ್ಡಾ ತಾಲೂಕುಗಳ ಬಹುತೇಕ ರೆಸಾರ್ಟ್​ಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ದೋಣಿ ವಿಹಾರಕ್ಕೂ ಅವರದ್ದೇ ಫ್ಯಾಮಿಲಿ ಇದ್ದರೆ ಮಾತ್ರವೇ ಅವಕಾಶ ಕಲ್ಪಿಸಿ ಕೊಡುತ್ತಿದ್ದಾರೆ. ಈ ಮೂಲಕ ಕೋವಿಡ್ ನಿಯಾಮವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

ಕೊರೊನಾ ಬಳಿಕ ಮತ್ತೆ ಪ್ರವಾಸೋದ್ಯಮ ಪ್ರವಾಸಿಗರಿಗೆ ಮುಕ್ತವಾಗಿದೆ. ಕೆಲ ಪ್ರವಾಸಿ ತಾಣಗಳು ಜನರ ಆಗಮನದಿಂದ ಮತ್ತೆ ಜೀವ ಕಳೆ ಪಡೆದುಕೊಂಡಿವೆ.

ABOUT THE AUTHOR

...view details