ಕಾರವಾರ: ಕಾರವಾರ ನಗರದ ಹಬ್ಬುವಾಡ ರಸ್ತೆಯು ಸಂಪೂರ್ಣ ಹದಗೆಟ್ಟಿದು, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಕಾರವಾರ ಹಾಗೂ ಕೈಗಾ ನಡುವಿನ ರಾಜ್ಯ ಹೆದ್ದಾರಿ ಇದಾಗಿದೆ.
ಸುಮಾರು ಒಂದು ಕಿಲೋ ಮೀಟರ್ ರಸ್ತೆಯು ಕಳೆದ ಐದಾರು ತಿಂಗಳಿನಿಂದ ಸಂಪೂರ್ಣ ಗುಂಡಿ ಬಿದ್ದಿದು ರಸ್ತೆಯಲ್ಲಿ ಸಂಚರಿಸಲು ಕಷ್ಟಪಡಬೇಕಾಗಿದೆ. ಗುಂಡಿಗಳನ್ನ ತಪ್ಪಿಸಲು ಹೋಗಿ ಪದೇ ಪದೆ ಅಪಘಾತವಾಗಳು ಸಂಭವಿಸಿವೆ.
ಕಾರವಾರ ರೈಲ್ವೆ ನಿಲ್ದಾಣಕ್ಕೂ ಸಹ ಇದೇ ರಸ್ತೆಯಲ್ಲಿ ಹೋಗಬೇಕಾಗಿದ್ದು ಸಾರ್ವಜನಿಕರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಇಲ್ಲಿನ ಸಾರ್ವಜನಿಕರು ರಸ್ತೆ ಮದ್ಯೆಯೇ ಬಾಳೆಗಿಡವನ್ನ ನೆಟ್ಟು ಸ್ಥಳೀಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿ ಅದಷ್ಟು ಬೇಗ ರಸ್ತೆಯನ್ನು ಸರಿಪಡಿಸುವಂತೆ ಅಗ್ರಹಿಸಿದರು.
ಇದಲ್ಲದೇ ಸ್ಥಳೀಯ ಆಟೋ ಚಾಲಕರು ತಾವು ದುಡಿಯುವುದಕ್ಕಿಂತ ಹಾಳಾದ ರಸ್ತೆಯಲ್ಲಿ ಆಟೋ ಓಡಾಟ ಮಾಡಿದರೆ ಆಟೋ ರಿಪೇರಿಗೆ ಹಣ ವ್ಯಯ ಮಾಡಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದರು. ಇನ್ನು ಇದೇ ತಿಂಗಳ ಹತ್ತನೇ ತಾರೀಕಿನ ಒಳಗೆ ರಸ್ತೆ ಸರಿಪಡಿಸಲು ಮುಂದಾಗದೇ ಇದ್ದರೇ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಅನ್ನಭಾಗ್ಯ ಅಕ್ಕಿ ಮಾರಾಟ ತಡೆಯದಿದ್ದರೆ ಹೋರಾಟ: ಬ್ರಿಜೇಶ್ ಕಾಳಪ್ಪ