ಕಾರವಾರ: ರಾಜ್ಯ ಸರ್ಕಾರ ಕೊರೊನಾ ಸೋಂಕು ಇಲ್ಲದ ಪ್ರದೇಶಗಳಿಗೆ ಲಾಕ್ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದು, ಜನ ಸಂಚಾರ ಕೂಡ ಆರಂಭಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಮಾತ್ರ 11 ಜನರಲ್ಲಿ ಕಾಣಿಸಿಕೊಂಡಿದ್ದ ಕೊರೊನಾದಿಂದ ಇದೀಗ 10 ಜನರು ಗುಣಮುಖವಾಗಿದ್ದಾರೆ. ಇನ್ನೋರ್ವವರು ಮಾತ್ರ ಕಾರವಾರದ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಾಕ್ಡೌನ್ ನಡುವೆಯೂ ಕಾರವಾರದಲ್ಲಿ ಜನ ಸಂಚಾರ ಆದರೆ ಇದೀಗ ರಾಜ್ಯ ಸರ್ಕಾರ ಕೂಡ ಕೆಲ ಅವಶ್ಯಕ ವಸ್ತುಗಳ ಮಾರಾಟ ಹಾಗೂ ಖರೀದಿಗೆ ಅವಕಾಶ ನೀಡಿದ್ದು, ಕಾರವಾರದಲ್ಲಿ ಇಂದು ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿವೆ. ಕಿರಾಣಿ ಅಂಗಡಿ, ಹಣ್ಣಿನ ಅಂಗಡಿ, ಐಸ್ ಕ್ರೀಂ, ಬೇಕರಿ, ಮೀನು ಮಾರಾಟ ಹೀಗೆ ಹಲವು ರಿತಿಯ ವ್ಯಾಪಾರ ಆರಂಭಿಸಲಾಗಿದೆ.
ಇದರಿಂದ ಜನ ಕೂಡ ಖರೀದಿಗೆ ಆಗಮಿಸುತ್ತಿದ್ದು, ನಗರದ ವಿವಿಧ ಭಾಗಗಳಲ್ಲಿ ಜನ ಸಂಚಾರ ಕೂಡು ಕಂಡುಬರುತ್ತಿದೆ. ಇನ್ನು ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಲಾಕ್ಡೌನ್ ಸಡಿಲಿಕೆ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರ ಬಿದ್ದಿಲ್ಲ. ಪೊಲೀಸರು ಕೂಡ ಅಲ್ಲಲ್ಲಿ ಕಾವಲು ನಿಂತಿದ್ದು, ಪೊಲೀಸರ ಕಣ್ಣು ತಪ್ಪಿಸಿ ವಾಹನಗಳ ಮೂಲಕ ಜನ ಸಂಚಾರ ಮಾಡತೊಡಗಿದ್ದಾರೆ.