ಶಿರಸಿ :ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಬೆಳೆ ನಾಶವಾಗಿದ್ದಕ್ಕೆ ಬೇಸರಗೊಂಡ ಶಿರಸಿ ತಾಲೂಕಿನ ಬನವಾಸಿಯ ರೈತನೋರ್ವ ಕೀಟ ನಾಶಕ ಸೇವಿಸಿ ಆತ್ಮಹತ್ಯೆ( farmer Commits suicide) ಮಾಡಿಕೊಂಡಿದ್ದಾರೆ.
ಅಕಾಲಿಕ ಮಳೆಗೆ ಬೆಳೆ ಹಾನಿ : ಬನವಾಸಿಯ ರೈತ ಆತ್ಮಹತ್ಯೆ - ರೈತ ಆತ್ಮಹತ್ಯೆ
ಮಳೆಯಿಂದ ಬೆಳೆ ನಷ್ಟವಾದ ಹಿನ್ನೆಲೆ ಬೇಸರಗೊಂಡು ಶಿರಸಿ ತಾಲೂಕಿನ ಬನವಾಸಿಯ ರೈತನೋರ್ವ ಆತ್ಮಹತ್ಯೆಗೆ (farmer Commits suicide)ಶರಣಾಗಿದ್ದಾರೆ..
ಗಂಗಾಧರ ಫಕೀರಣ್ಣ ಶೇಷಣ್ಣನವರ್
ಬನವಾಸಿಯ ನರೂರು ಗ್ರಾಮದ ಗಂಗಾಧರ ಫಕೀರಣ್ಣ ಶೇಷಣ್ಣನವರ್ (58) ಆತ್ಮಹತ್ಯೆಗೆ ಶರಣಾದ ರೈತ. ತನ್ನ ಗದ್ದೆಯಲ್ಲಿ ಬೆಳೆಸಿದ್ದ ಶುಂಠಿ, ಭತ್ತದ ಬೆಳೆ ಮಳೆಗೆ ಹಾಳಾಗಿದ್ದರಿಂದ ಬೇಸರಗೊಂಡಿದ್ದರು.
ನ.17ರಂದು ಕೀಟ ನಾಶಕ ಸೇವಿಸಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ರೈತ ಚಿಕಿತ್ಸೆಗೆ ಸ್ಪಂದಿಸದೆ ನ. 19ರಂದು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.