ಕರ್ನಾಟಕ

karnataka

ETV Bharat / state

ದಾಂಡೇಲಿಯಲ್ಲಿ ಮತ್ತೆ ಊರೊಳಗೆ ನುಗ್ಗಿದ ಮೊಸಳೆ; ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ದಾಂಡೇಲಿ ನಗರದ ಕೋಗಿಲಬನ ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

crocodile
ಮೊಸಳೆ

By

Published : Sep 2, 2021, 3:46 PM IST

Updated : Sep 2, 2021, 7:12 PM IST

ಕಾರವಾರ: ಜನವಸತಿ ಪ್ರದೇಶದ ರಸ್ತೆ ಪಕ್ಕದ ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ ಘಟನೆ ದಾಂಡೇಲಿ ನಗರದ ಕೋಗಿಲಬನ ಗ್ರಾಮದಲ್ಲಿ ನಡೆದಿದೆ.

ದಾಂಡೇಲಿಯಲ್ಲಿ ಮತ್ತೆ ಊರಿಗೆ ಬಂದ ಮೊಸಳೆ

ಇಂದು ಬೆಳಗ್ಗೆ ಗ್ರಾಮದ ಚರಂಡಿಯ ಮೂಲಕ ಬಂದ ಮೊಸಳೆಯನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದರು. ತಕ್ಷಣ ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ಕೂಡ ನೀಡಿದ್ದರು. ದಾಂಡೇಲಿಯ ಮೊಸಳೆ ಪಾರ್ಕ್​ನಿಂದ ಅದು ಗ್ರಾಮಕ್ಕೆ ಬಂದಿದ್ದು, ಎರಡು ತಿಂಗಳ ಹಿಂದೆ ಕೂಡ ಇದೇ ರೀತಿ ಊರಿನ ರಸ್ತೆಯಲ್ಲಿ ರಾಜಾರೋಷವಾಗಿ ತಿರುಗಾಡಿ ಆತಂಕ ಸೃಷ್ಟಿಸಿತ್ತು.

ಇದೀಗ ಪದೇ ಪದೆ ಮೊಸಳೆ ಪಾರ್ಕ್ ಬಿಟ್ಟು ಗ್ರಾಮಕ್ಕೆ ನುಗ್ಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೆ, ಇದನ್ನು ನೋಡುವುದಕ್ಕಾಗಿ ಜನ ಮುಗ್ಗಿಬಿದ್ದಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದಾವಿಸಿದ್ದು, ಮೊಸಳೆ ರಕ್ಷಣೆ ಕಾರ್ಯಾಚರಣೆ ನಡೆಸಿದ್ದಾರೆ.

ಓದಿ:ಹಾಸನ: ಬಹಿರ್ದೆಸೆಗೆ ಹೋದಾಗ ಕಾಡಾನೆ ಕಂಡು ಮಕ್ಕಳಲ್ಲಿ ಆತಂಕ

Last Updated : Sep 2, 2021, 7:12 PM IST

ABOUT THE AUTHOR

...view details