ಕರ್ನಾಟಕ

karnataka

ETV Bharat / state

ದಾಂಡೇಲಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಎಳೆದೊಯ್ದ ಮೊಸಳೆ

ಕಾಳಿ ನದಿ ದಡದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಮೇಲೆ ಮೊಸಳೆ ದಾಳಿ ನಡೆಸಿ ಎಳೆದೊಯ್ದ ಘಟನೆ ದಾಂಡೇಲಿಯಲ್ಲಿ ನಡೆದಿದೆ.

Etv Bharatcrocodile-drags-a-man-into-river-in-dandeli
ದಾಂಡೇಲಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಎಳೆದೊಯ್ದ ಮೊಸಳೆ

By

Published : Aug 13, 2022, 9:09 PM IST

ಕಾರವಾರ(ಉತ್ತರ ಕನ್ನಡ):ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೋರ್ವನನ್ನು ಮೊಸಳೆ ಎಳೆದೊಯ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವಿನಾಯಕ ನಗರದ ಅಲೈಡ್ ಬಳಿ ನಡೆದಿದೆ. ದಾಂಡೇಲಿಯ ಸುರೇಶ್ ವಸಂತ್ ತೇಲಿ(44) ನಾಪತ್ತೆ‌ಯಾಗಿರುವ ವ್ಯಕ್ತಿ.

ಕಾಳಿ ನದಿ ದಂಡೆ ಮೇಲೆ ಮೀನು ಹಿಡಿಯುತ್ತಿದ್ದಾಗ ಮೊಸಳೆ ಎಳೆದೊಯ್ದಿದೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ(Rescue Team) ಮತ್ತು ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಸ್ಥಳಕ್ಕೆ ಡಿವೈಎಸ್​​ಪಿ ಕೆ.ಎಲ್ ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:2 ತಾಸು ಮೊಸಳೆಯೊಂದಿಗೆ ಯುವಕನ ಹೋರಾಟ.. ಕೊನೆಗೆ ಆಗಿದ್ದೇನು? ಭಯಾನಕ ವಿಡಿಯೋ

ABOUT THE AUTHOR

...view details