ಕಾರವಾರ: ವಾರದಿಂದ ಬಿಡದೇ ಸುರಿದ ಮಳೆಯಿಂದಾಗಿ ಮನೆಗೆ ಸೇರಿಕೊಂಡಿದ್ದ ಮೊಸಳೆ ಮರಿಯೊಂದನ್ನು ರಕ್ಷಿಸಿದ ಘಟನೆ ಕುಮಟಾ ತಾಲೂಕಿನ ಗೋಕರ್ಣದ ನಾಡುಮಾಸ್ಕೇರಿಯಲ್ಲಿ ನಡೆದಿದೆ.
ಕಾರವಾರದಲ್ಲಿ ಭಾರೀ ಮಳೆ: ಮನೆ ಸೇರಿತ್ತು ಮೊಸಳೆ ಮರಿ! - ಕರ್ನಾಟಕ ನೆರೆ
ಕಾರವಾದಲ್ಲಿ ವಾರದಿಂದ ಬಿಡದೇ ಸುರಿದ ಮಳೆಯಿಂದಾಗಿ ಮನೆಗೆ ಸೇರಿಕೊಂಡಿದ್ದ ಮೊಸಳೆ ಮರಿಯೊಂದನ್ನು ರಕ್ಷಿಸಿದ ಘಟನೆ ಕುಮಟಾ ತಾಲೂಕಿನ ಗೋಕರ್ಣದ ನಾಡುಮಾಸ್ಕೇರಿಯಲ್ಲಿ ನಡೆದಿದೆ.

ಮೊಸಳೆ ಮರಿ ರಕ್ಷಣೆ
ಮೊಸಳೆ ಮರಿ ರಕ್ಷಣೆ
ಭಾರಿ ಮಳೆಯಿಂದಾಗಿ ಜಲಾವೃತಗೊಂಡ ಪ್ರದೇಶದಲ್ಲಿ ಸೇರಿಕೊಂಡಿದ್ದ ಮೊಸಳೆ ಇಂದು ನಾಡುಮಾಸ್ಕೇರಿಯ ಶಿವು ಗೌಡ ಎಂಬುವವರ ಮನೆಯಲ್ಲಿ ಕಾಣಿಸಿಕೊಂಡಿತ್ತು. ಮೊಸಳೆ ನೋಡಿದ ಮನೆಯವರು ಆತಂಕಕ್ಕೊಳಗಾಗಿದ್ದರು.
ತಕ್ಷಣ ಕುಮಟಾ ಬಗ್ಗೋಣದ ಉರಗ ತಜ್ಞ ಪವನ್ ನಾಯ್ಕ ಹಾಗೂ ಅಶೋಕ ನಾಯ್ಕರನ್ನು ಸಂಪರ್ಕಿಸಿ ಮೊಸಳೆ ಇರುವ ವಿಷಯ ತಿಳಿಸಿದ್ದರು. ತಕ್ಷಣ ಆಗಮಿಸಿದ ಇಬ್ಬರೂ ಸ್ಥಳೀಯರ ಸಹಾಯದಿಂದ ಮೊಸಳೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಈ ನಡುವೆ ಎಂದೂ ಬಾರದ ಅಪರೂಪದ ಅತಿಥಿಯನ್ನು ನೋಡಿ ಭಯಭೀತರಾಗಿದ್ದ ಜನ, ಮೊಸಳೆ ಮುಟ್ಟಿ ಖುಷಿಪಟ್ಟರು.
Last Updated : Aug 13, 2019, 5:21 PM IST