ಕರ್ನಾಟಕ

karnataka

ETV Bharat / state

ಕನ್ಯೆ ಸಿಗದೆ ಮದುವೆ ಆಗಲಿಲ್ಲ.. ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ - ಮದುವೆ ಆಗದಕ್ಕೆ ಯುವಕ ಆತ್ಮಹತ್ಯೆ

ಕನ್ಯೆ ಸಿಗದಕ್ಕೆ ಮನನೊಂದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಲ್ಲಾಪುರದಲ್ಲಿ ನಡೆದಿದೆ.

ಮದುವೆಗೆ ಹುಡಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ
ಮದುವೆಗೆ ಹುಡಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ

By

Published : Jun 29, 2023, 1:27 PM IST

ಶಿರಸಿ: ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತೇಲಂಗಾರದಲ್ಲಿ ನಡೆದಿದೆ.‌ ಕಿರಗಾರಿಮನೆಯ ನಾಗರಾಜ್​ ಗಣಪತಿ ಗಾಂವ್ಕರ್​ (35) ಮೃತ ವ್ಯಕ್ತಿ. ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ನೊಂದಿದ್ದ ಯುವಕ ಮನೆಯ ಸಮೀಪದ ಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಯುವಕ ನಾಗರಾಜ್ ಕೃಷಿ ಮಾಡಿಕೊಂಡು ಜೀವನ‌ ಸಾಗಿಸುತ್ತಿದ್ದ. ಇದರಿಂದ ಮದುವೆಯಾಗಲು ವಿಳಂಬವಾಗಿತ್ತು. ಕಾರಣ ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಕನ್ಯೆ ಕೊಡಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಪತ್ರ..ಹಾವೇರಿ ಜಿಲ್ಲೆಯ ನರೇಗಲ್​ ಗ್ರಾಮದಲ್ಲಿ 50 ವರ್ಷದ ವರನೋರ್ವ ಮದುವೆಗೆ ಕನ್ಯೆ ಸಿಗ್ತಿಲ್ಲವೆಂದು ಬೇಸತ್ತು ಗ್ರಾಮ ಪಂಚಾಯತ್​ ಮೆಟ್ಟಿಲೇರಿದ್ದರು. ತಮಗೆ ಕನ್ಯೆ ನೋಡಿ ಮದುವೆ ಮಾಡಿಸಿ ಎಂದು ಗ್ರಾಮ ಪಂಚಾಯತ್​ ಅಧಿಕಾರಿಗಳಿಗೆ ಮೊರೆ ಇಟ್ಟಿದ್ದರು. ನರೇಗಲ್ ಗ್ರಾಮದ ದ್ಯಾಮಣ್ಣ ಕಮ್ಮಾರ್ ಗ್ರಾಮ ಪಂಚಾಯತ್​ ಮೊರೆ ಹೋಗಿದ್ದರು.

ಕನ್ಯೆ ಸಿಗದಕ್ಕೆ ಆತ್ಮಹತ್ಯೆ:ಕೆಲ ದಿನಗಳ ಹಿಂದೆ ಹಾವೇರಿಯಲ್ಲಿ ಮದುವೆಗೆಕನ್ಯೆ ಸಿಗದಿದ್ದಕ್ಕೆ ಮನನೊಂದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಮಂಜುನಾಥ ನಾಗನೂರು ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದರು. ಮಂಜುನಾಥ್​ ಅವರಿಗೆ ಏಳೆಂಟು ವರ್ಷಗಳಿಂದ ಯಾರೊಬ್ಬರೂ ಮದುವೆಗೆ ಕನ್ಯೆ ಕೊಟ್ಟಿರಲಿಲ್ಲ. ತನ್ನಿಂದ ತಂದೆ ತಾಯಿಗೆ ತೊಂದರೆ ಎಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಂಜುನಾಥ್ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಮದುವೆಗೆ ಕನ್ಯೆ ಸಿಗದಕ್ಕೆ ಆತ್ಮಹತ್ಯೆಗೆ ಯತ್ನ: ಮತ್ತೊಂದೆಡೆ ವಯಸ್ಸಾದರೂ ಮದುವೆಗೆ ಹೆಣ್ಣು ಸಿಕ್ಕಿಲ್ಲ ಎಂದು ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿತ್ತು. ಸ್ಮಶಾನದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಯಸ್ಸಾದರೂ ತನಗೆ ಮದುವೆಯಾಗಿಲ್ಲ ಎಂದು ಮನನೊಂದ ಗ್ರಾಮದ ಸ್ಮಶಾನದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದರು.

ಮನೆ ತೊರೆದ ಯುವಕ :ಮದುವೆಯಾಗಲು ಹೆಣ್ಣು ಕೊಡುವವರು ಸರ್ಕಾರಿ ನೌಕರಿಗೆ ಪಟ್ಟು ಹಿಡಿದಿದ್ದರಿಂದ ಬೇಸತ್ತು ಯುವಕನೋರ್ವ ಮನೆ ತೊರೆದಿರುವ ಘಟನೆ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ನಡೆದಿತ್ತು. ಅಭಿಷೇಕ್​ ಎಂಬುವವರು ನಾಪತ್ತೆಯಾಗಿದ್ದರು. ಮನೆಯವರು ಅಭಿಷೇಕ್​ಗೆ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದು, ಎಲ್ಲೇ ಹೋದರೂ ಸರ್ಕಾರಿ ನೌಕರಿ ಇರುವವನೇ ಬೇಕೆಂದು ಬೇಡಿಕೆ ಇಡುತ್ತಿದ್ದರಂತೆ. ಅಭಿಷೇಕ್ ಮನನೊಂದು ಮನೆ ತೊರೆದಿದ್ದರು.

ಇದನ್ನೂ ಓದಿ:Farmer suicide: ಕನ್ಯೆ ಸಿಗದಿದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ

ABOUT THE AUTHOR

...view details