ಕರ್ನಾಟಕ

karnataka

ETV Bharat / state

ಓವರ್ ಟೇಕ್ ಮಾಡುವಾಗ ಕಾರುಗಳ ನಡುವೆ ಡಿಕ್ಕಿ: ಓರ್ವ ಸಾವು, 10 ಮಂದಿಗೆ ಗಾಯ - when-over-take-one-death

ಮುಧೋಳ ತಾಲೂಕಿನ ನಿವಾಸಿ ಮಹಾದೇವ ಹೊಸ್ಮನಿ (26) ಮೃತ ವ್ಯಕ್ತಿ. ಕಾರು ಮುರ್ಡೇಶ್ವರದಿಂದ ಯಲ್ಲಾಪುರ ಕಡೆ ತೆರಳುತ್ತಿದ್ದಾಗ ಲಾರಿಯನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದ ವೇಳೆ ಎದುರಿನಿಂದ ಬಂದ ಹುಂಡೈ ಕಾರು ಡಿಕ್ಕಿಯಾಗಿದೆ ಎನ್ನಲಾಗ್ತಿದೆ.

ಡಿಕ್ಕಿ
ಡಿಕ್ಕಿ

By

Published : Apr 3, 2021, 9:13 PM IST

ಕಾರವಾರ:ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಮೃತಪಟ್ಟು 10 ಮಂದಿ ಗಾಯಗೊಂಡಿರುವ ಘಟನೆ, ಅಂಕೋಲಾ ತಾಲೂಕಿನ ಹೆಬ್ಬುಳ ಬಳಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿವಾಸಿ ಮಹಾದೇವ ಹೊಸ್ಮನಿ (26) ಮೃತ ವ್ಯಕ್ತಿ. ಕಾರು ಮುರ್ಡೇಶ್ವರದಿಂದ ಯಲ್ಲಾಪುರ ಕಡೆ ತೆರಳುತ್ತಿದ್ದಾಗ ಲಾರಿಯನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದ ವೇಳೆ ಎದುರಿನಿಂದ ಬಂದ ಹುಂಡೈ ಕಾರು ಡಿಕ್ಕಿಯಾಗಿದೆ ಎನ್ನಲಾಗಿದೆ.

ಅಪಘಾತದ ರಭಸಕ್ಕೆ ಎರಡು ಕಾರುಗಳ ಮುಂಭಾಗ ನಜ್ಜುಗುಜ್ಜಾಗಿ, 10 ಮಂದಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಹೈವೇ ಪೆಟ್ರೋಲಿಂಗ್ ಸಿಬ್ಬಂದಿ ಹಾಗೂ ಇತರೆ ಸವಾರರು ಅಂಕೋಲಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ..ಪುರಿ ಜಗನ್ನಾಥ ದೇವಾಲಯದ ಬ್ಯಾರಿಕೇಡ್​ನಲ್ಲಿ ಸಿಲುಕಿದ ಬಾಲಕಿ ತಲೆ: ಮುಂದೇನಾಯ್ತು?

ABOUT THE AUTHOR

...view details