ಕಾರವಾರ:ಅಕ್ರಮ ಗೋ ಸಾಗಾಟ ಮಾಡಿ ತಲೆಮರಿಸಿಕೊಂಡಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಹೊನ್ನಾವರ ಹಾಗೂ ಮಂಕಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರು ಉಡುಪಿ ಮೂಲದವರಾಗಿದ್ಧಾರೆ.
ಉಡುಪಿಯ ವಾಜಿದ್ ಜಾಫರ್ (24), ದೃಶ್ಯ ಮೆಂಡನ್ (20), ಭಟ್ಕಳದ ಸಯ್ಯದ್ ಮುಸ್ಸಾ (22), ಮಹ್ಮದ್ ಫಯಾಜ್ (34), ಪ್ರಣವ್ ಶೆಟ್ಟಿ (19) ಹಾಗೂ ಮಹ್ಮದ್ ಇಬ್ರಾಹಿಂ (42) ಎಂಬುವರನ್ನು ಬಂಧಿಸಲಾಗಿದೆ. ಆಗಸ್ಟ್ 3 ಮತ್ತು 22ರಂದು ಹೊನ್ನಾವರ ತಾಲೂಕಿನ ಮಂಕಿಯ ಗುಣವಂತೆ ಮತ್ತು ಮಾವಿನಕಟ್ಟಾದಲ್ಲಿ ಕಾರುಗಳ ಮೂಲಕ ಬಂದು ಗೋ ಕಳವು ಮಾಡಲಾಗಿತ್ತು.