ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಕರ್ಫ್ಯೂ ಅವಧಿಯನ್ನು 10 ಗಂಟೆಗೆ ಸೀಮಿತಗೊಳಿಸಿದ್ದು, ಅವಧಿ ಮುಗಿದರೂ ಅಂಗಡಿ ಬಂದ್ ಮಾಡದ ವ್ಯಾಪಾರಿಗಳಿಗೆ ಹಾಗೂ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ನಗರದ ಗಾಂಧಿ ಬಜಾರ್, ಸವಿತಾ ಸರ್ಕಲ್ ಸೇರಿದಂತೆ ಇನ್ನಿತರ ಭಾಗದಲ್ಲಿ ಅವಧಿ ಮುಗಿದರೂ ಕಿರಾಣಿ ಅಂಗಡಿ, ಮೀನು ಸೇರಿದಂತೆ ಇನ್ನಿತರ ವ್ಯಾಪಾರ ಮಾಡತೊಡಗಿದ್ದರು. ಪೊಲೀಸ್ ಸೈರನ್ ಸದ್ದು ಕೇಳಿದರೂ ಬಂದ್ ಮಾಡದೆ ಉಡಾಫೆ ಪ್ರದರ್ಶಿಸುತ್ತಿದ್ದ ಅಂಗಡಿಕಾರರು ಹಾಗೂ ಮೀನುಗಾರ ಮಹಿಳೆಯರಿಗೆ ಎಚ್ಚರಿಸಿದ ಪೊಲೀಸರು ಲಾಠಿ ಬಿಸಿ ತೋರಿಸಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.