ಕರ್ನಾಟಕ

karnataka

ETV Bharat / state

ಕಾರವಾರದಲ್ಲಿ ಮೇ. 17 ರಂದು ಕೋವಿಡ್ ಲ್ಯಾಬ್‌ಗಳ ಕಾರ್ಯ ಸ್ಥಗಿತ! - Karwar latest news

ಲ್ಯಾಬ್​​ನಲ್ಲಿ ಹೊಗೆ ದ್ರಾವಣ ಸಿಂಪಡಿಸಿ ಶುದ್ಧಿಕರಿಸುವ (FUMIGATION) ನಿಟ್ಟಿನಲ್ಲಿ ಮೇ 17 ರಿಂದ 18ರ ಬೆಳಗ್ಗೆ 8 ಗಂಟೆವರೆಗೆ ಆರ್ ಟಿ ಪಿಸಿಆರ್ ಮತ್ತು ಟ್ರೂನಾಟ್ ಪರೀಕ್ಷೆ ಸ್ಥಗಿತ ಮಾಡಲಾಗುತ್ತದಂತೆ.

covid labs shutdown on may 17th in karwar
covid labs shutdown on may 17th in karwar

By

Published : May 14, 2021, 6:59 PM IST

ಕಾರವಾರ: ಮೈಕ್ರೋಬಯಾಲಜಿ ತಜ್ಞರ ಅಭಿಪ್ರಾಯದಂತೆ ಕಾರವಾರ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯ ಕೊವಿಡ್ ಲ್ಯಾಬ್​​​ನಲ್ಲಿ ಹೊಗೆ ದ್ರಾವಣ ಸಿಂಪಡಿಸಿ ಶುದ್ಧಿಕರಿಸುವ (FUMIGATION) ನಿಟ್ಟಿನಲ್ಲಿ ಮೇ 17 ರಿಂದ 18ರ ಬೆಳಗ್ಗೆ 8 ಗಂಟೆವರೆಗೆ ಆರ್ ಟಿ ಪಿಸಿಆರ್ ಮತ್ತು ಟ್ರೂನಾಟ್ ಪರೀಕ್ಷೆ ಸ್ಥಗಿತ ಮಾಡಲಾಗುತ್ತದಂತೆ.


ಏಪ್ರಿಲ್ ತಿಂಗಳಲ್ಲಿ ಕೋವಿಡ್-_19 ಲ್ಯಾಬ್‌ಗಳಲ್ಲಿ ಶುದ್ಧೀಕರಿಸುವ ಕೆಲಸ ಮಾಡಲಾಗಿತ್ತು ಈಗ ಮತ್ತೆ ಕೋವಿಡ್ ಲ್ಯಾಬ್‌ಗಳನ್ನು ಶುದ್ಧೀಕರಿಸುವ ಅವಶ್ಯಕತೆಯಿದೆ ಎಂದು ಮೈಕ್ರೋಬಯಾಲಜಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದ್ದರಿಂದ ಸೇವೆ ಸ್ಥಗಿತಗೊಳಿಸಲಾಗುತ್ತಿದ್ದು, ಮೇ. 18ರಂದು ಬೆಳಗ್ಗೆ 8.30 ರಿಂದ ಎಂದಿನಂತೆ ಲ್ಯಾಬ್‌ ಅನ್ನು ಪ್ರಾರಂಭಿಸಲಾಗುವುದು ಎಂದು ಕ್ರಿಮ್ಸ್‌ನ ನಿರ್ದೇಶಕ ಡಾ. ಗಜಾನನ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details