ಕರ್ನಾಟಕ

karnataka

ETV Bharat / state

ಮನ್​ಕಿ ಬಾತ್ ಕೇಳುತ್ತಲೇ ಹಸೆಮಣೆ ಏರಿದ ಜೋಡಿ... ಮೋದಿ ಅಭಿಮಾನಿಯಿಂದ ವಿಭಿನ್ನ ಪ್ರಯತ್ನ - listening

ಪ್ರದಾನಿ ನರೇಂದ್ರ ಮೋದಿ ಅಭಿಮಾನಿಯೊಬ್ಬರು ಪಿಎಂ ಅವರ ಮನ್ ಕೀ ಬಾತ್ ಕಾರ್ಯಕ್ರಮ ಕೇಳುತ್ತಲೇ ಮದುವೆಯಾಗಿರುವ ಅಪರೂಪದ ಘಟನೆ ನಡೆದಿದೆ.

ಮನ್ ಕೀ ಬಾತ್

By

Published : Feb 25, 2019, 11:31 AM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಯೊಬ್ಬರು ಪಿಎಂ ಅವರ ಮನ್ ಕೀ ಬಾತ್ ಕಾರ್ಯಕ್ರಮ ಕೇಳುತ್ತಲೇ ಮದುವೆಯಾದರು.

ಮನ್ ಕೀ ಬಾತ್

ಸುಳ್ಯ ನಗರದ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯಲ್ಲಿ ಬಿಜೆಪಿ ಕಾರ್ಯಕರ್ತ ಅಜ್ಜಾವರ ಗ್ರಾಮದ ಕೊಂಬರಡ್ಕ ಪಂಜಿಮಲೆಯ ಜಯರಾಮ ಹಾಗೂ ಮರ್ಕಂಜ ಗ್ರಾಮದ ದಮಯಂತಿ ಎಂಬ ವಧು ವರರು ವಿನೂತನವಾಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಕೊನೆಗೆ ಪ್ರಧಾನಿ ನರೇಂದ್ರ ಮೋದಿಯವರ 53 ನೇ ಮನ್ ಕಿ‌ ಬಾತ್ ಕಾರ್ಯಕ್ರಮ ಕೇಳುತ್ತಲೇ ಹಸೆಮಣೆ ಏರಿದರು.

ಜನರ ಆಶೀರ್ವಾದ ಪಡೆಯುವ ಮೊದಲೇ ನವ ವಧುವರರು ಪ್ರಧಾನಿಯವರ ‘ಮನ್ ಕಿ ಬಾತ್’ ಆಲಿಸಲು ಮಂಟಪ ಬಿಟ್ಟು ರೇಡಿಯೋದ ಎದುರು ಬಂದರು. ಮದುವೆಗೆ ಬಂದ ಎಲ್ಲ ಬಂಧುಗಳೊಂದಿಗೆ ಕುಳಿತು ಮೋದಿಯವರ ಮನದ ಮಾತು ಆಲಿಸಿದರು. ಇದಕ್ಕಾಗಿ ಮದುವೆ ಮಂಟಪದಲ್ಲಿ ವಿಶೇಷವಾಗಿ ರೇಡಿಯೋ ಮತ್ತು ಸ್ಪೀಕರ್​ನ ವ್ಯವಸ್ಥೆ ಮಾಡಲಾಗಿತ್ತು.

ABOUT THE AUTHOR

...view details