ಕಾರವಾರ:ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿ, ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಚೆಂಡಿಯಾ ಗ್ರಾಮದ ಬಳಿ ಸಂಭವಿಸಿದೆ.
ಕಾರವಾರ ಬಳಿ ಭೀಕರ ಅಪಘಾತ... ದಂಪತಿ ಸಾವು, ಬಾಲಕಿ ಸ್ಥಿತಿ ಗಂಭೀರ - lorry car accidnt in karwar
ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ್ದರೆ, ಬಾಲಕಿ ಸ್ಥಿತಿ ಗಂಭೀರವಾಗಿದೆ.
![ಕಾರವಾರ ಬಳಿ ಭೀಕರ ಅಪಘಾತ... ದಂಪತಿ ಸಾವು, ಬಾಲಕಿ ಸ್ಥಿತಿ ಗಂಭೀರ couple-died-in-karwar-lorry-car-accident](https://etvbharatimages.akamaized.net/etvbharat/prod-images/768-512-5859604-thumbnail-3x2-surya.jpg)
ಕಾರವಾರದಲ್ಲಿ ಭೀಕರ ಅಪಘಾತ
ಕಾರವಾರದಲ್ಲಿ ಭೀಕರ ಅಪಘಾತ
ಮೃತರನ್ನು ಗೋವಾ ಮೂಲದವರು ಎಂದು ಗುರುತಿಸಲಾಗಿದ್ದು, ಅವರ ಹೆಸರು ತಿಳಿದುಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಂಕೋಲಾದಿಂದ ಕಾರವಾರದ ಕಡೆ ತೆರಳುತ್ತಿದ್ದ ಕಾರು ಓವರ್ಟೇಕ್ ಮಾಡಲು ಹೋಗಿ ಎದುರಿನ ಬಂದ ಲಾರಿಗೆ ಗುದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಹಿಂಭಾಗದಲ್ಲಿದ್ದ ಬಾಲಕಿ ಸ್ಥಿತಿ ಗಂಭೀರ ಗಾಯಗೊಂಡಿದ್ದು, ತಕ್ಷಣ ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ತೆರಳಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jan 27, 2020, 5:43 PM IST