ಕರ್ನಾಟಕ

karnataka

ETV Bharat / state

ಉ.ಕನ್ನಡ ಜಿಲ್ಲೆಯಲ್ಲಿ 48 ಸೋಂಕಿತರು ಪತ್ತೆ: 119 ಮಂದಿ ಗುಣಮುಖ - Corona infection

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ತಗ್ಗಿದೆ. ಇಂದು ಸಾಕಷ್ಟು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ds
ಉ.ಕನ್ನಡ ಜಿಲ್ಲೆಯಲ್ಲಿ ಮತ್ತೆ 48 ಮಂದಿಗೆ ಕೊರೊನಾ

By

Published : Oct 18, 2020, 7:57 PM IST

ಕಾರವಾರ: ಜಿಲ್ಲೆಯಲ್ಲಿಂದು 48 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,018ಕ್ಕೆ ಏರಿಕೆಯಾಗಿದೆ.

ಕಾರವಾರದಲ್ಲಿ 11, ಕುಮಟಾ 4, ಹೊನ್ನಾವರ 5, ಭಟ್ಕಳ 1, ಶಿರಸಿ 19, ಸಿದ್ದಾಪುರ 5, ಮುಂಡಗೋಡ 1 ಹಾಗೂ ಹಳಿಯಾಳದಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಇನ್ನು, ಕಾರವಾರ 13, ಅಂಕೋಲಾ 2, ಕುಮಟಾ 39, ಹೊನ್ನಾವರ 17, ಭಟ್ಕಳ 24, ಶಿರಸಿ 12, ಮುಂಡಗೋಡ 1, ಜೊಯಿಡಾ 3 ಹಾಗೂ ಹಳಿಯಾಳ 8 ಪ್ರಕರಣಗಳು ಸೇರಿ ಒಟ್ಟು 119 ಸೋಂಕಿತರು ಗುಣಮುಖರಾಗಿದ್ದಾರೆ.

ಕಾರವಾರ, ಕುಮಟಾದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. 548 ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದಾರೆ. 657 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 1,205 ಸಕ್ರಿಯ ಪ್ರಕರಣಗಳು ಸದ್ಯ ಜಿಲ್ಲೆಯಲ್ಲಿದ್ದು 159 ಮಂದಿ ಮೃತಪಟ್ಟಿದ್ದಾರೆ.

ABOUT THE AUTHOR

...view details