ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ನಿನ್ನೆ 181 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 43 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಉ.ಕ.ಜಿಲ್ಲೆಯಲ್ಲಿ 181 ಮಂದಿಗೆ ಕೊರೊನಾ... 43 ಜನರು ಗುಣಮುಖ - Uttarakannad corona update
ಉತ್ತರಕನ್ನಡ ಜಿಲ್ಲೆಯಲ್ಲಿ ನಿನ್ನೆ 181 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5,369ಕ್ಕೆ ಏರಿಕೆಯಾಗಿದೆ.
ಉ.ಕ.ಜಿಲ್ಲೆಯಲ್ಲಿಂದು 181 ಮಂದಿಗೆ ಕೊರೊನಾ...43 ಜನರು ಗುಣಮುಖ
ಕಾರವಾರದ 23, ಅಂಕೋಲಾ 38, ಕುಮಟಾ 35, ಹೊನ್ನಾವರ 20, ಭಟ್ಕಳ 14, ಶಿರಸಿ 17, ಸಿದ್ದಾಪುರ 4, ಯಲ್ಲಾಪುರ 10, ಮುಂಡಗೋಡ 4, ಹಳಿಯಾಳ 14 ಹಾಗೂ ಜೊಯಿಡಾದ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5,369ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಅಂಕೋಲಾ 3, ಕುಮಟಾ 4, ಶಿರಸಿ 5, ಮುಂಡಗೋಡ 21, ಜೊಯಿಡಾ 2 ಹಾಗೂ ಹಳಿಯಾಳದ 8 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 3,984 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 55 ಮಂದಿ ಸಾವನ್ನಪ್ಪಿದ್ದು, 1,330 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.