ಕರ್ನಾಟಕ

karnataka

ETV Bharat / state

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 162 ಮಂದಿಯಲ್ಲಿ ಕೊರೊನಾ ಪತ್ತೆ...! - Coronal infection detected in 162 People

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು‌ ಅತಿ ಹೆಚ್ಚು 162 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 88 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Karwar
ಕಾರವಾರ

By

Published : Jul 25, 2020, 7:34 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು‌ ಅತಿ ಹೆಚ್ಚು 162 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 88 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪತ್ತೆಯಾದ ಸೋಂಕಿತರ ಪೈಕಿ ಅತಿ ಹೆಚ್ಚು ಭಟ್ಕಳದಲ್ಲಿದ್ದು, 55 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಹಳಿಯಾಳದಲ್ಲಿ ಮತ್ತೆ 45 ಮಂದಿಗೆ, ಅಂಕೋಲಾ 16, ಕಾರವಾರ 12, ಶಿರಸಿ 11, ಹೊನ್ನಾವರ 8, ಮುಂಡಗೋಡ 5, ಕುಮಟಾ 5, ಜೊಯಿಡಾ 2, ಸಿದ್ದಾಪುರ, ಯಲ್ಲಾಪುರ ತಲಾ 1 ಪ್ರಕರಣ ಪತ್ತೆಯಾಗಿದೆ. ಇನ್ನು ಗುಣಮುಖರಾಗಿ ಬಿಡುಗಡೆಯಾದವರ ಪೈಕಿ ಭಟ್ಕಳದ 33 ಮಂದಿ, ಹಳಿಯಾಳದ 33, ಮುಂಡಗೋಡ 13, ಕುಮಟಾ 5, ಕಾರವಾರ 3 ಹಾಗೂ ಹೊನ್ನಾವರದ ಓರ್ವರು ಗುಣಮುಖರಾಗಿದ್ದಾರೆ.

ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1668 ಸೋಂಕಿತರು ಪತ್ತೆಯಾಗಿದ್ದು, 846 ಮಂದಿ ಗುಣಮುಖರಾಗಿದ್ದಾರೆ. 14 ಮಂದಿ ಈವರೆಗೆ ಸಾವನ್ನಪ್ಪಿದ್ದು, 744 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details