ಉತ್ತರಕನ್ನಡ:ಮೂರು ತಿಂಗಳ ಮಗುವಿಗೆ ತುರ್ತಾಗಿ ಅವಶ್ಯಕವಿದ್ದ ಔಷಧವೊಂದನ್ನು ಕೊರೊನಾ ವಾರಿಯರ್ಸ್ ತಂಡ ಮೂರು ಜಿಲ್ಲೆಗಳ ಗಡಿದಾಟಿಸಿ ಸಮಯಕ್ಕೆ ಸರಿಯಾಗಿ ತಲುಪಿಸಿದೆ.
ಮೂರು ಜಿಲ್ಲೆಯ ಗಡಿದಾಟಿಸಿ ಮಗುವಿಗೆ ಔಷಧ ಪೂರೈಸಿದ ಕೊರೊನಾ ವಾರಿಯರ್ಸ್ - ಮಂಗಳೂರಿನ ತೊಕ್ಕೊಟ್ಟು ಕಲ್ಲಾಪು
ಕ್ಯಾಪ್ಟನ್ ಮಣಿವಣ್ಣನ್ ನೇತೃತ್ವದ ಕೊರೊನಾ ವಾರಿಯರ್ಸ್ ತಂಡ, ಹೊನ್ನಾವರದಲ್ಲಿನ ಮೂರು ವರ್ಷದ ಮಗುವಿಗೆ ತುರ್ತಾಗಿ ಅವಶ್ಯವಿದ್ದ ಔಷಧವನ್ನ ಮಂಗಳೂರಿನಿಂದ ಸಮಯಕ್ಕೆ ಸರಿಯಾಗಿ ತಲುಪಿಸಿದ್ದಾರೆ.
ಕ್ಯಾಪ್ಟನ್ ಮಣಿವಣ್ಣನ್ ನೇತೃತ್ವದ ಕೊರೊನಾ ವಾರಿಯರ್ಸ್ ತಂಡ, ಹೊನ್ನಾವರದಲ್ಲಿನ ಮೂರು ವರ್ಷದ ಮಗುವಿಗೆ ತುರ್ತಾಗಿ ಅವಶ್ಯವಿದ್ದ ಔಷಧಿಯನ್ನು ಮಂಗಳೂರಿನಿಂದ ಸಮಯಕ್ಕೆ ಸರಿಯಾಗಿ ತಲುಪಿಸಿದ್ದಾರೆ. ಮಂಗಳೂರಿನ ತೊಕ್ಕೊಟ್ಟು ಕಲ್ಲಾಪು ನಿವಾಸಿ ರಾಬಿನ್ ಡಿಸೋಜಾ ಹಾಗೂ ಅವರ ಹೆಂಡತಿ,ಮಗು ಹೊನ್ನಾವರದಲ್ಲಿದ್ದರು. ಆದರೆ, ಮಗುವಿಗೆ ಅವಶ್ಯವಿದ್ದ ಔಷಧ ತೊಕ್ಕೊಟ್ಟು ಕಲ್ಲಾಪುವಿನಲ್ಲಿತ್ತು. ಲಾಕ್ಡೌನ್ ಇರುವ ಕಾರಣ ಅದನ್ನ ತಲುಪಿಸಲು ಸಾಧ್ಯವಾಗದೆ ರಾಬಿನ್, ಕೊನೆಗೆ ಬೆಂಗಳೂರಿನ ಕೊರೊನಾ ವಾರಿಯರ್ಸ್ ತಂಡದ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದರು. ಸಮಸ್ಯೆ ಹೇಳಿ, ತಕ್ಷಣ ಮಂಗಳೂರಿನಿಂದ ಹೊನ್ನಾವರಕ್ಕೆ ಔಷಧ ತಲುಪಿಸಲು ನೆರವಾಗುವಂತೆ ಮನವಿ ಮಾಡಿದ್ದರು.
ಅದರಂತೆ ಬೆಂಗಳೂರಿನ ಕಂಟ್ರೋಲ್ ರೂಮ್ನಿಂದ ಮಂಗಳೂರು,ಉಡುಪಿ ಜಿಲ್ಲೆಯ ಕೊರೊನಾ ವಾರಿಯರ್ಸ್ಗಳಿಗೆ ಅಲರ್ಟ್ ಮಾಡಿದ್ದರು. ಅದರಂತೆ ಉಡುಪಿಯಿಂದ ಹೊರಟ ಕೊರೊನಾ ವಾರಿಯರ್ಸ್ರನ್ನ ಶಿರೂರು ಚೆಕ್ ಪೋಸ್ಟ್ ಬಳಿ ತಡೆದ ಪೊಲೀಸರು, ಉತ್ತರಕನ್ನಡಕ್ಕೆ ತೆರಳಿದರೆ, ಮತ್ತೆ ಬರದಂತೆ ಎಚ್ಚರಿಸಿದ್ದರು. ಇದರಿಂದ ಚಿಂತಿತರಾದ ಕೊರೊನಾ ವಾರಿಯರ್ಸ್ ಹೊನ್ನಾವರದ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸಿ,ಜೌಷಧ ತಲುಪಿಸಿದ್ದಾರೆ.