ಕಾರವಾರ:ಕಾರವಾರ ಮೆಡಿಕಲ್ ಕಾಲೇಜು ಆವರಣದಲ್ಲಿ ಗೊಂದಲಕ್ಕೆ ಆಸ್ಪದ ಇಲ್ಲದಂತೆ ಲಸಿಕೆ ನೀಡುತ್ತಿದ್ದು, ಲಸಿಕಾ ಕೇಂದ್ರಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಕಲ್ಪಿಸಲಾಗಿದೆ.
ಓದಿ: ಲಸಿಕೆ ಅಭಿಯಾನಕ್ಕೆ ಸಂಭ್ರಮಾಚರಣೆ.. ಈಡುಗಾಯಿ ಒಡೆದು ಸಿಹಿ ವಿತರಣೆ

ಮಹಾಮಾರಿ ಕೊರೊನಾಗೆ ರಾಮಬಾಣವಾಗಿ ಲಸಿಕೆ ಬಂದ ಬೆನ್ನಲ್ಲೆ, ಅದನ್ನು ಅಚ್ಚುಕಟ್ಟಾಗಿ ವಿತರಣೆ ಮಾಡಲು ಎಲ್ಲೆಡೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಉತ್ತರ ಕನ್ನಡದಲ್ಲಿ ಈ ವಿಷಯವನ್ನು ತುಸು ಗಂಭೀರವಾಗಿಯೇ ಪರಿಗಣಿಸಿರುವ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಲಸಿಕೆ ನೀಡುವ ಕೇಂದ್ರದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗದಂತೆ ಕ್ರಮವಹಿಸಿದೆ.
ಪ್ರಧಾನಿ ನರೇಂದ್ರ ಮೋದಿ ಆನ್ಲೈನ್ ಮೂಲಕ ಚಾಲನೆ ನೀಡಿ ಕಾರ್ಯಕ್ರಮ ಮುಗಿಸಿದ ಬಳಿಕ, ಕಾರವಾರ ಕೋವಿಡ್ ಲಸಿಕಾ ಕೇಂದ್ರದಲ್ಲಿದ್ದ ರಾಜಕೀಯ ಮುಖಂಡರು, ಮಾಧ್ಯಮದವರು ಸೇರಿದಂತೆ ಎಲ್ಲರನ್ನು ಲಸಿಕಾ ಕೇಂದ್ರದಿಂದ ಹೊರಗಿಟ್ಟು ಕೇವಲ ಲಸಿಕೆ ಪಡೆಯುವವರು, ಲಸಿಕೆ ನೀಡುವ ವೈದ್ಯರು, ನರ್ಸ್ ಹಾಗೂ ಇತರೆ ಅವಶ್ಯ ಸಿಬ್ಬಂದಿ ಮಾತ್ರ ಕೇಂದ್ರದಲ್ಲಿ ಇರಲು ಅವಕಾಶ ಕಲ್ಪಿಸಲಾಗಿದೆ.
ಅಲ್ಲದೆ ಚುನಾವಣೆ ಮಾದರಿಯಲ್ಲಿಯೇ ಪೊಲೀಸರನ್ನು ಕೇಂದ್ರದಲ್ಲಿಟ್ಟು ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಲಸಿಕೆ ಪಡೆಯುವವರು ಆತಂಕಕ್ಕೀಡಾಗದಂತೆ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿ ಧೈರ್ಯ ತುಂಬಿ ಲಸಿಕೆ ನೀಡಿದ್ದು, ಅರ್ಧಗಂಟೆಗಳ ಕಾಲ ಅವರ ವೀಕ್ಷಣೆ ನಡೆಸಿ ಬಿಡಲಾಗುತ್ತಿದೆ. ಲಸಿಕೆ ಪಡೆಯುವವರಿಗೆ ಗೊಂದಲ ಸೃಷ್ಟಿಯಾಗದಂತೆ ಈ ರೀತಿ ಬಿಗಿ ಭದ್ರತೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.