ಕರ್ನಾಟಕ

karnataka

ETV Bharat / state

ಕೊರೊನಾ 3ನೇ ಅಲೆ ಆತಂಕ: ಹಳಿಯಾಳದಲ್ಲಿ ಮಕ್ಕಳಿಗೆ ನ್ಯೂಟ್ರಿಷನ್ ಕಿಟ್ ವಿತರಣೆ

ಕಾರವಾರ ಜಿಲ್ಲೆಯ ಹಳಿಯಾಳದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಆರ್.ವಿ.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನ್ಯೂಟ್ರಿಷನ್ ಮೆಡಿಕಲ್ ಕಿಟ್ ವಿತರಣೆ ಮಾಡಲಾಯಿತು‌.

ಮಕ್ಕಳಿಗೆ ನ್ಯೂಟ್ರಿಷಿನ್ ಕಿಟ್ ವಿತರಸಿದ ದೇಶಪಾಂಡೆ ಟ್ರಸ್ಟ್​
Deshpande Trust distributed Nutrition Kit to Children at Karwar

By

Published : Jul 1, 2021, 4:22 PM IST

ಕಾರವಾರ: ಕೊರೊನಾದ 3ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಹಳಿಯಾಳದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 50ಕ್ಕೂ ಹೆಚ್ಚು ಮಕ್ಕಳನ್ನು ಗುರುತಿಸಿ ಸಾಂಕೇತಿಕವಾಗಿ ಮೆಡಿಕಲ್‌ ಕಿಟ್ ವಿತರಣೆ ನಡೆಯಿತು.

ಮಕ್ಕಳಿಗೆ ನ್ಯೂಟ್ರಿಷಿನ್ ಕಿಟ್ ವಿತರಿಸಿದ ದೇಶಪಾಂಡೆ ಟ್ರಸ್ಟ್​

ಈ ವೇಳೆ ಮಾತನಾಡಿದ ಆರ್.ವಿ. ದೇಶಪಾಂಡೆ, ಜಿಲ್ಲೆಯಾದ್ಯಂತ ಸುಮಾರು 186 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 4 ಸಾವಿರಕ್ಕೂ ಹೆಚ್ಚು ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡುವ ಮತ್ತು ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮುಂದಾಗಿರುವ ಜಿಲ್ಲಾ ಪಂಚಾಯಿತಿಗೆ ಟ್ರಸ್ಟ್ ವತಿಯಿಂದ ನೆರವು ನೀಡಲಾಗುತ್ತಿದೆ ಎಂದರು.

ಮೊದಲ ಹಂತದಲ್ಲಿ ಹಳಿಯಾಳ ಭಾಗದ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಮೆಡಿಕಲ್ ನ್ಯೂಟ್ರಿಷಿನ್ ಕಿಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಜೊಯಿಡಾ, ಮುಂಡಗೋಡು ಹಾಗೂ ಎಲ್ಲಿ ಅಗತ್ಯವಿದೆಯೋ ಆ ಭಾಗದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಿ ಮೆಡಿಕಲ್ ನ್ಯೂಟ್ರಿಷನ್ ಕಿಟ್ ವಿತರಿಸುವುದಾಗಿ ಅವರು ತಿಳಿಸಿದ್ದಾರೆ.

ABOUT THE AUTHOR

...view details