ಕರ್ನಾಟಕ

karnataka

ETV Bharat / state

ಭಟ್ಕಳ ಕೊರೊನಾ ಸೋಂಕಿತ ಪರಾರಿ ಪ್ರಕರಣ ಸುಖಾಂತ್ಯ: ಯುವಕನ ಮನವೊಲಿಸಿ ಆಸ್ಪತ್ರೆಗೆ ಕರೆತಂದ ಅಧಿಕಾರಿಗಳು - police brings back the corona suspect

ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಶಂಕಿತ ವ್ಯಕ್ತಿ ಪರಾರಿಯಾಗಿದ್ದ. ಆದರೆ ಪೊಲೀಸರು ಆರೋಗ್ಯಾಧಿಕಾರಿಗಳ ಮೂಲಕ ಆತನಿಗೆ ಕೌನ್ಸೆಲಿಂಗ್​ ನಡೆಸಿ ವಾಪಸ್​ ಆಸ್ಪತ್ರೆಗೆ ಕರೆತಂದಿದ್ದಾರೆ.

btkl
btkl

By

Published : Mar 30, 2020, 12:34 PM IST

ಭಟ್ಕಳ: ತಾಲೂಕು ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೊರೊನಾ ಶಂಕಿತ ಕೊನೆಗೂ ಪತ್ತೆಯಾಗಿದ್ದಾನೆ.

ಮಾರ್ಚ್ 27ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಪರಾರಿಯಾಗಿದ್ದ. ಬಳಿಕ ಯುವಕನನ್ನು ಪತ್ತೆ ಹಚ್ಚಿದ ಪೊಲೀಸರು ಆರೋಗ್ಯ ಇಲಾಖೆಯಿಂದ ಮನ ಒಲಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಿನ್ನೆ ಬೆಳಗ್ಗೆಯಿಂದ ಆಸ್ಪತ್ರೆಯ ಸುತ್ತಮುತ್ತ ಯುವತಿಯೊಬ್ಬಳು ಮಾಸ್ಕ್ ಧರಿಸಿಕೊಂಡು ಓಡಾಡಿಕೊಂಡಿದ್ದಳು. ಇದೇ ಯುವತಿ ಯುವಕನಿಗೆ ಊಟ ನೀಡುವ ನೆಪದಲ್ಲಿ ವಾರ್ಡ್ ಪ್ರವೇಶಿಸಿ, ಯುವಕನನ್ನು ಕರೆದುಕೊಂಡು ಹೋಗಿದ್ದಾಳೆ.

ಜ್ವರ ಹಾಗೂ ಗಂಟಲು ನೋವು ಹೊಂದಿದ್ದ ಈತನನ್ನು ಅನುಮಾನದ ಮೇಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈತ ಕೊರೊನಾ ಸೋಂಕಿತರ ಅಥವಾ ವಿದೇಶದಿಂದ ಬಂದ ಯಾರ ಸಂಪರ್ಕಕ್ಕೂ ಹೋಗಿರಲಿಲ್ಲ. ಜೊತೆಗೆ, ಕೊರೊನಾ ಲಕ್ಷಣ ಕಂಡು ಬಂದಿರಲಿಲ್ಲ ಎಂದು ವೈದ್ಯರು ದೃಢಪಡಿಸಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿತ್ತು.

ಆದರೆ ಭಯಗೊಂಡ ಯುವಕ ಪರಾರಿಯಾಗಿ ತನ್ನ ಮನೆ ಸೇರಿಕೊಂಡಿದ್ದ. ಮಾಹಿತಿ ತಿಳಿದ ಭಟ್ಕಳ ಪೊಲೀಸರು ಈತನ ಮನೆಗೆ ತೆರಳಿ ಕೌನ್ಸೆಲಿಂಗ್ ಮಾಡಿ, ನಂತರ ಭಟ್ಕಳ ಆಸ್ಪತ್ರೆಗೆ ಮರಳಿ ಕರೆತಂದಿದ್ದಾರೆ. ಇಡೀ ಭಟ್ಕಳದಲ್ಲಿ ಭಯ ಹುಟ್ಟಿಸಿದ್ದ ಶಂಕಿತನ ಪರಾರಿ ಪ್ರಕರಣ ಸುಖಾಂತ್ಯ ಕಂಡಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ.

ABOUT THE AUTHOR

...view details