ಕಾರವಾರ: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಇಷ್ಟಾದರೂ ಕಾರವಾರದ ಮುಖ್ಯ ಮೀನು ಮಾರುಕಟ್ಟೆಯಲ್ಲಿ ಮೀನಿಗಾಗಿ ಜನ ಮುಗ್ಗಿಬಿದ್ದಿದ್ದು ಮಾರುಕಟ್ಟೆಯಲ್ಲಿ ಜನಜಂಗುಳಿ ನಿರ್ಮಾಣವಾಗಿದೆ.
ಕಾರವಾರದಲ್ಲಿ ಮೀನಿಗಾಗಿ ಮುಗಿಬಿದ್ದ ಜನ; ಲೆಕ್ಕಕ್ಕಿಲ್ಲದ ಕೊರೊನಾ ನಿಯಮ ! - ಮೀನಿಗಾಗಿಕೊರೊನಾ ನಿಯಮ ಉಲ್ಲಂಘನೆ
ನಗರದ ಹೃದಯಭಾಗದಲ್ಲಿರುವ ಮಾರುಕಟ್ಟೆಯಲ್ಲಿ ಮೀನು ಖರೀದಿಗಾಗಿ ಜನ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರ ಮರೆತು ಕೆಲವರು ಮಾಸ್ಕ್ ಧರಿಸದೇ ಖರೀದಿಯಲ್ಲಿ ತೊಡಗಿದ್ದು, ಯಾರಿಗೂ ಕೊರೊನಾ ಆತಂಕವೇ ಇಲ್ಲದಂತೆ ಗೋಚರವಾಗುತ್ತಿದೆ.
Market
ನಗರದ ಹೃದಯಭಾಗದಲ್ಲಿರುವ ಮಾರುಕಟ್ಟೆಯಲ್ಲಿ ಮೀನು ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ. ಸಾಮಾಜಿಕ ಅಂತರ ಮರೆತು ಕೆಲವರು ಮಾಸ್ಕ್ ಧರಿಸದೇ ಖರೀದಿಯಲ್ಲಿ ತೊಡಗಿದ್ದು, ಯಾರಿಗೂ ಕೊರೊನಾ ಆತಂಕವೇ ಇಲ್ಲದಂತೆ ಗೋಚರವಾಗುತ್ತಿದೆ.
ಇನ್ನು ಮಾರುಕಟ್ಟೆಗಳಲ್ಲಿ ಜನಜಂಗುಳಿ ಸೇರುವುದನ್ನು ನಿಯಂತ್ರಿಸಬೇಕಿದ್ದ ಅಧಿಕಾರಿಗಳು ಕೂಡ ಇತ್ತ ಕಡೆ ಮುಖಮಾಡಿದಂತಿಲ್ಲ. ಬೆಳಗ್ಗೆಯಿಂದಲೂ ಮಾರುಕಟ್ಟೆಯಲ್ಲಿ ಜನ ತುಂಬಿಕೊಂಡಿದ್ದು ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.
Last Updated : Apr 27, 2021, 4:51 PM IST