ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿಂದು 161 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 7,935ಕ್ಕೆ ಏರಿಕೆಯಾಗಿದೆ.
ಉತ್ತರಕನ್ನಡದಲ್ಲಿಂದು 161 ಮಂದಿಗೆ ಕೊರೊನಾ; 106 ಜನರು ಗುಣಮುಖ - Uttarakannad Corona death
ಉತ್ತರಕನ್ನಡ ಜಿಲ್ಲೆಯಲ್ಲಿಂದು 161 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 106 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಾರವಾರ 6, ಅಂಕೋಲಾ16, ಕುಮಟಾ 19, ಹೊನ್ನಾವರ 17, ಶಿರಸಿ 4, ಸಿದ್ದಾಪುರದಲ್ಲಿ 4, ಯಲ್ಲಾಪುರ 15, ಮುಂಡಗೋಡ 18 ಹಾಗೂ ಹಳಿಯಾಳದಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಇಂದು ಯಲ್ಲಾಪುರದ ಓರ್ವ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ. ಕಾರವಾರ 60, ಅಂಕೋಲಾ 15, ಕುಮಟಾ 3, ಹೊನ್ನಾವರ 9, ಸಿದ್ದಾಪುರ 15 ಹಾಗೂ ಹಳಿಯಾಳದ ನಾಲ್ವರು ಸೇರಿ 106 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 5,463 ಮಂದಿ ಗುಣಮುಖರಾಗಿದ್ದಾರೆ.
ಸದ್ಯ ಜಿಲ್ಲೆಯಲ್ಲಿ 2,377 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.