ಕರ್ನಾಟಕ

karnataka

ETV Bharat / state

ಯಲ್ಲಾಪುರದ ಮೃತ ವೃದ್ಧೆಗೆ ಸೋಂಕು ದೃಢಪಟ್ಟರೂ, ಆಕೆ ಸತ್ತಿದ್ದು ಹೃದಯಾಘಾತದಿಂದ: ಡಿಸಿ ಸ್ಪಷ್ಟನೆ - ಕಾರವಾರದಲ್ಲಿ ಕೊರೊನಾ ಸೋಂಕಿತ ಸಾವು,

ಕೊರೊನಾ ಸೋಂಕಿತ ವೃದ್ಧೆಯೊಬ್ಬರು ಹೃದಾಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.

corona patient died, corona patient died by cardiac arrest, corona patient died in Uttara Kannada, karwar corona patient died, karwar corona patient died news, ಕೊರೊನಾ ಸೋಂಕಿತ ಸಾವು, ಹೃದಯಾಘಾತದಿಂದ ಕೊರೊನಾ ಸೋಂಕಿತ ಸಾವು, ಉತ್ತರಕನ್ನಡದಲ್ಲಿ ಹೃದಯಾಘಾತದಿಂದ ಕೊರೊನಾ ಸೋಂಕಿತ ಸಾವು, ಕಾರವಾರದಲ್ಲಿ ಕೊರೊನಾ ಸೋಂಕಿತ ಸಾವು, ಕಾರವಾರದಲ್ಲಿ ಕೊರೊನಾ ಸೋಂಕಿತ ಸಾವು ಸುದ್ದಿ,
ಯಲ್ಲಾಪುರದಲ್ಲಿ ಹೃದಯಾಘಾತದಿಂದ ವೃದ್ಧೆ ಸಾವು

By

Published : Jul 1, 2020, 5:06 PM IST

ಕಾರವಾರ:ನಿನ್ನೆ ರಾತ್ರಿ ಸಾವನ್ನಪ್ಪಿದ್ದ ಯಲ್ಲಾಪುರ ಮೂಲದ 69 ವರ್ಷದ ವೃದ್ಧೆಯಲ್ಲಿ ಕೊರೊನಾ ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಸ್ಪಷ್ಟಪಡಿಸಿದ್ದಾರೆ.

ಯಲ್ಲಾಪುರದಲ್ಲಿ ಹೃದಯಾಘಾತದಿಂದ ವೃದ್ಧೆ ಸಾವು

ಆದರೆ ವೃದ್ಧೆ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿಲ್ಲ. ಮಹಾರಾಷ್ಟ್ರದಲ್ಲಿ ಕಳೆದ ಎಂಟು ದಿನಗಳ ಹಿಂದೆ ವೃದ್ಧೆಯ ಪತಿ ಸಾವನ್ನಪ್ಪಿದ್ದರು. ಇದರಿಂದ ಈಕೆ ಯಲ್ಲಾಪುರದ ಮಗನ ಮನೆಗೆ ಬಂದಿದ್ದರು.

ತುಂಬಾ ಆಯಾಸದಿಂದ ಬಳಲುತ್ತಿದ್ದ ಈಕೆಯನ್ನು ಮನೆಯಲ್ಲಿ ಇಡದೇ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೆ ಗಂಟಲು ದ್ರವ ಕೂಡ ಪರೀಕ್ಷೆ ನಡೆಸಲಾಗಿತ್ತು. ಈ ಮಧ್ಯೆ ಬಾತ್​ರೂಂಗೆ ತೆರಳಿದಾಗ ಜಾರಿ ಬಿದ್ದು ಗಂಭೀರಗೊಂಡಿದ್ದರು. ನಿನ್ನೆ ರಾತ್ರಿ ಹೃದಯಾಘಾತದಿಂದ ಅವರು ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details