ಭಟ್ಕಳ: ದೇಶದಲ್ಲಿಯೇ ಭಟ್ಕಳ ಸದ್ಯಕ್ಕೆ ಕೊರೊನಾ ಪ್ರಕರಣದ ಹಾಟ್ಸ್ಪಾಟ್ ಎನಿಸಿಕೊಂಡಿದೆ. 21 ದಿನಗಳ ವರೆಗೆ ಮಾತ್ರ ಜನರ ಸಹಕಾರವಲ್ಲದೇ ಭಟ್ಕಳದಲ್ಲಿ ಸಂಪೂರ್ಣವಾಗಿ ಕೊರೊನಾ ಮುಕ್ತಾಯವಾಗುವವರೆಗೂ ಭಟ್ಕಳಿಗರ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ಹೇಳಿದ್ದಾರೆ.
ವೈರಸ್ ಸಂಪೂರ್ಣ ಸಂಹಾರ ಆಗೋವರೆಗೂ ಸಹಕಾರ ಕೊಡಿ: ಡಿಎಸ್ಪಿ ಮನವಿ
ಕೊರೊನಾ ಪ್ರಕರಣ ನಿಯಂತ್ರಣಕ್ಕೆ ಪತ್ರಕರ್ತರ ಸಲಹೆ ಕೇಳಿ ಮಾತನಾಡಿದ ಅವರು, ಭಟ್ಕಳದಲ್ಲಿ ಮೆಡಿಸಿನ್ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಪೂರೈಕೆಗೆ ಹಾಟ್ಲೈನ್ನನ್ನು ತಾಲೂಕು ಆಡಳಿತ ವತಿಯಿಂದ ಆರಂಭಿಸಲಿದ್ದೇವೆ. ಇದರಿಂದ ಜನರಿಗೆ ಅನೂಕೂಲವಾಗಲಿದ್ದು, ಆ ಮೂಲಕ ಮನೆಯಿಂದ ಯಾರು ಹೊರಗೆ ಬರಬಾರದು ಎಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ವಸ್ತುಗಳ ಪೂರೈಕೆ ಬಗ್ಗೆ ಗಮನ ಹರಿಸಲಿದ್ದೇವೆ. ಜನರಿಗೆ ಪೊಲೀಸರ ಮೂಲಕ ಅರಿವು ಮೂಡಿಸುವಲ್ಲಿ ಕಾರ್ಯ ಮಾಡುತ್ತಿದ್ದೇವೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್
ಕೊರೊನಾ ಪ್ರಕರಣ ನಿಯಂತ್ರಣಕ್ಕೆ ಪತ್ರಕರ್ತರ ಸಲಹೆ ಕೇಳಿ ಮಾತನಾಡಿದ ಅವರು, ಭಟ್ಕಳದಲ್ಲಿ ಮೆಡಿಸಿನ್ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಪೂರೈಕೆಗೆ ಹಾಟ್ಲೈನ್ ಅನ್ನು ತಾಲೂಕು ಆಡಳಿತ ವತಿಯಿಂದ ಆರಂಭಿಸಲಿದ್ದೇವೆ. ಇದರಿಂದ ಜನರಿಗೆ ಅನೂಕೂಲವಾಗಲಿದ್ದು, ಆ ಮೂಲಕ ಮನೆಯಿಂದ ಯಾರು ಹೊರಗೆ ಬರಬಾರದು ಎಂದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ವಸ್ತುಗಳ ಪೂರೈಕೆ ಬಗ್ಗೆ ಗಮನ ಹರಿಸಲಿದ್ದೇವೆ. ಜನರಿಗೆ ಪೊಲೀಸರ ಮೂಲಕ ಅರಿವು ಮೂಡಿಸುವಲ್ಲಿ ಕಾರ್ಯ ಮಾಡುತ್ತಿದ್ದೇವೆ.
ಜಿಲ್ಲೆಯಲ್ಲಿ ಕರ್ಫ್ಯೂ ಉಲ್ಲಂಘನೆ ಸಂಬಂಧಿಸಿದಂತೆ ಒಟ್ಟು 48 ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, ಭಟ್ಕಳದಲ್ಲಿ ಇಲ್ಲಿಯ ತನಕ ಒಂದು ಪ್ರಕರಣ ದಾಖಲಾಗಿದೆ. ಇನ್ನು ಶಿರಸಿ ದಾಂಡೇಲಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಜಿಂದಾಬಾದ್ ಎಂದು ಅವಹೇಳನಕಾರಿ ಹೇಳಿಕೆ ಬರೆದವರಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. 20 ದಿನ ಮೀನು ಬಿಟ್ಟರೆ ಒಳ್ಳೆಯದು ಆದರೆ ಇದಕ್ಕಾಗಿ ಏನಾದರು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇವೆ. ಜನರ ಓಡಾಟ ಸೂಕ್ಷ್ಮವಾಗಿ ಗಮನಿಸಲು ತಾಲೂಕಿನಲ್ಲಿ ಡ್ರೋಣ್ ವ್ಯವಸ್ಥೆ ಮಾಡಲಿದ್ದು, ಇದರಿಂದಲೂ ಜನರ ಓಡಾಟ ನಿಯಂತ್ರಿಸಲು ಅನೂಕೂಲವಾಗಲಿದೆ ಎಂದಿದ್ದಾರೆ.