ಕಾರವಾರ: ಕಾರವಾರ ಮೆಡಿಕಲ್ ಕಾಲೇಜ್ನ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಕಳ್ಳನೋರ್ವ ಪರಾರಿಯಾಗಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಕೊರೊನಾ ಸೋಂಕಿತ ಕಳ್ಳ ಆಸ್ಪತ್ರೆಯಿಂದ ಪರಾರಿ - karwar corona news
ಶಿಕಾರಿಪುರ ಮೂಲದ ಮುಂಡಗೋಡಿನಲ್ಲಿ ಬಂಧಕ್ಕೊಳಗಾಗಿದ್ದ ಕೊರೊನಾ ಸೋಂಕಿತ ಕಳ್ಳನೋರ್ವ ಆಸ್ಪತ್ರೆಯ ಎಸಿಯುನಿಂದಲೇ ಪರಾರಿಯಾಗಿದ್ದು, ಈವರೆಗೂ ಪತ್ತೆಯಾಗಿಲ್ಲ.
ಶಿಕಾರಿಪುರ ಮೂಲದ ಮುಂಡಗೋಡಿನಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು. ಕಾತೂರ ಅರಣ್ಯ ವಲಯ ವ್ಯಾಪ್ತಿಯ ಓರಲಗಿ ಶ್ರೀಗಂಧ ಪುನರುತ್ಪತ್ತಿ ನೆಡುತೋಪಿನಲ್ಲಿ ಗಂಧದ ಮರ ಕತ್ತರಿಸಿ ಅದರ ತುಂಡುಗಳನ್ನು ಕಾರಿನಲ್ಲಿ ಸಾಗಿಸುತ್ತಿರುವಾಗ ಕಾತೂರ ಅರಣ್ಯ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆ ವೇಳೆ ಕೊವಿಡ್ ಪರೀಕ್ಷೆ ನಡೆಸಿದ್ದು, ಒಬ್ಬನಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಹೀಗೆ ಬಂಧನವಾದ ಆರೋಪಿಗೆ ಕಾರವಾರದ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಮುಂಜಾನೆ ಕಳ್ಳ ಐಸಿಯುನಿಂದ ಪರಾರಿಯಾಗಿದ್ದು ಈವರೆಗೂ ಪತ್ತೆಯಾಗಿಲ್ಲ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಸೋಂಕಿತ ಕಳ್ಳನೋರ್ವ ಇದೇ ಆಸ್ಪತ್ರೆಯಿಂದ ಎರಡೆರಡು ಬಾರಿ ಪರಾರಿಯಾಗಿದ್ದ.