ಕರ್ನಾಟಕ

karnataka

ETV Bharat / state

ಕೋವಿಡ್​ ವಾರ್ಡ್​ನಿಂದ 2ನೇ ಬಾರಿ ಪರಾರಿಯಾಗಿದ್ದ ಕೊರೊನಾ ಸೋಂಕಿತ ಕಳ್ಳ ಪತ್ತೆ!

ಮೆಡಿಕಲ್ ಕಾಲೇಜಿನ ಕೋವಿಡ್​​​ ವಾರ್ಡ್​ನಿಂದ ಪರಾರಿಯಾಗಿದ್ದ ಕೊರೊನಾ ಸೋಂಕಿತ ಕಳ್ಳನನ್ನು ಪೊಲೀಸರು ಇದೀಗ ಕಾರವಾರ ತಾಲೂಕಿನ ಶಿರವಾಡ ಬಳಿ ಬಂಧಿಸಿದ್ದಾರೆ.

corona-infected-thief-arrested-by-police-at-karavara
ಕಾರವಾರ

By

Published : Jul 1, 2020, 3:40 PM IST

Updated : Jul 1, 2020, 6:13 PM IST

ಕಾರವಾರ: ಮೆಡಿಕಲ್ ಕಾಲೇಜಿನ ಕೋವಿಡ್​​​ ವಾರ್ಡ್​ನಿಂದ ಎರಡನೇ ಬಾರಿ ಪರಾರಿಯಾಗಿದ್ದ ಕೊರೊನಾ ಸೋಂಕಿತ ಖತರ್ನಾಕ್ ಕಳ್ಳನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ತಡರಾತ್ರಿ ಕೋವಿಡ್ ವಾರ್ಡ್​ನಿಂದ ಪರಾರಿಯಾದ ಬೆನ್ನಲ್ಲೇ ಹುಡುಕಾಟ ನಡೆಸಿದ್ದ ಪೊಲೀಸರು ಇದೀಗ ತಾಲೂಕಿನ ಶಿರವಾಡ ಬಳಿಯ ನಾರಗೇರಿ ಬಳಿ ಬಂಧಿಸಿದ್ದಾರೆ.

ಶಿರಸಿಯಲ್ಲಿ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಈತನನ್ನು ಬಂಧಿಸಲಾಗಿತ್ತು. ನಂತರ ಅನಾರೋಗ್ಯ ಹಿನ್ನೆಲೆ ಈತನ ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ದೃಢಪಟ್ಟಿತ್ತು. ಬಳಿಕ ಕಾರವಾರದ ಕೋವಿಡ್-19 ವಾರ್ಡ್​ಗೆ ದಾಖಲು ಮಾಡಲಾಗಿತ್ತು. ಕಳೆದ ಸೋಮವಾರ ವಾರ್ಡ್​ನಲ್ಲಿದ್ದ ಇಬ್ಬರ ಮೊಬೈಲ್ ಕದ್ದು ಪರಾರಿಯಾಗಿದ್ದ ಈತನನ್ನು ತಾಲೂಕಿನ ಕದ್ರಾ ಬಳಿ ಬಂಧಿಸಿ ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ನಿನ್ನೆ ರಾತ್ರಿ ವೇಳೆ ಕಳ್ಳ ಮತ್ತೆ ಬಾಗಿಲು ಮುರಿದು ವಾರ್ಡ್​ನಿಂದ ತಪ್ಪಿಸಿಕೊಂಡು ನಗರದ ಜನತೆಯಲ್ಲಿ ಆತಂಕ ಸೃಷ್ಟಿಸಿದ್ದ. ಆದರೆ ಇದೀಗ ನಾಡಗೇರಿ ಬಳಿಯ ಸ್ಥಳೀಯರು ನೀಡಿದ ಸುಳಿವಿನ‌ ಮೇರೆಗೆ ತೆರಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದೀಗ ಆತನನ್ನು ತಾಲೂಕಿನ ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡ್​ಗೆ ಮರಳಿ ಕರೆ ತಂದಿದ್ದು, ಹೆಚ್ಚಿನ ನಿಗಾ ಇಟ್ಟಿದ್ದಾರೆ‌.

Last Updated : Jul 1, 2020, 6:13 PM IST

ABOUT THE AUTHOR

...view details