ಕಾರವಾರ:ಆರೇಳು ವರ್ಷಗಳಿಂದ ಬ್ರೈನ್ ಟ್ಯೂಮರ್ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ 35 ವರ್ಷದ ವ್ಯಕ್ತಿಯೋರ್ವ ಕಾರವಾರದಲ್ಲಿ ನಿನ್ನೆ ಮೃತಪಟ್ಟಿದ್ದು, ಸಾವಿನ ನಂತರ ಬಿಡುಗಡೆಯಾದ ವರದಿಯಲ್ಲಿ ಸೋಂಕು ತಗುಲಿರುವುದು ಗೊತ್ತಾಗಿದೆ.
ಬಹುಅಂಗಾಂಗ ವೈಫಲ್ಯದಿಂದ ವ್ಯಕ್ತಿ ಸಾವು; ಬಳಿಕ ಸೋಂಕು ಪತ್ತೆ - ಕೊರೊನಾ ಸೋಂಕಿತರ ಬಲಿ
ಕಾರವಾರದಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿ ಮೃತಪಟ್ಟ ಬಳಿಕ, ಆತನಿಗೆ ಕೊರೊನಾ ವೈರಸ್ ಸೋಂಕಿರುವುದು ವರದಿಯಲ್ಲಿ ಗೊತ್ತಾಗಿದೆ.
ಈ ವ್ಯಕ್ತಿ ಬ್ರೈನ್ ಟ್ಯೂಮರ್, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಜಿಲ್ಲಾ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ದಾಖಲಾಗಿದ್ದ. ಮೂರು ದಿನಗಳ ಹಿಂದೆ ಈತನ ಪಕ್ಕದ ಬೆಡ್ನಲ್ಲಿದ್ದ ವೃದ್ಧೆಗೆ ಸೋಂಕಿನ ಲಕ್ಷಣಗಳಿದ್ದರೂ ಮುಚ್ಚಿಟ್ಟ ಪರಿಣಾಮ ಸಾವನ್ನಪ್ಪಿದ್ದಳು. ವೃದ್ಧೆ ಮತ್ತು ಆಕೆಯ ಕುಟುಂಬಸ್ಥರ ಎಡವಟ್ಟಿನಿಂದಾಗಿ ಆಸ್ಪತ್ರೆಯ ಸಿಬ್ಬಂದಿ ಸೇರಿ 8 ಮಂದಿಯಲ್ಲಿ ಸೋಂಕು ಪತ್ತೆಯಾಯಿತು.
ಅದರಲ್ಲಿ ಈತನಿಗೂ ಸೋಂಕು ಇರುವುದು ಸಾವಿನ ಬಳಿಕ ದೃಢಪಟ್ಟಿದೆ. ನಿನ್ನೆ ರಾತ್ರಿಯೇ ಕೋವಿಡ್ ನಿಯಮದಂತೆ ಶವ ಸಂಸ್ಕಾರ ನಡೆಸಲಾಗಿದೆ. ಈತನ ಸ್ಥಿತಿ ಮೊದಲಿನಿಂದಲೂ ಗಂಭೀರವಾಗಿತ್ತು. ಆದರೆ, ನಿನ್ನೆ ವರದಿ ಬಂದಿದೆ. ಅಷ್ಟರಲ್ಲಾಗಲೇ ಅಸಿನೀಗಿದ್ದ. ಆತ ಸೋಂಕಿನಿಂದಾಗಿ ಸತ್ತಿಲ್ಲ. ಸಾಯುವ ವೇಳೆ ಸೋಂಕು ತಗುಲಿದೆ ಎಂದು ಕ್ರೀಮ್ಸ್ ನಿರ್ದೇಶಕ ಗಜಾನನ ನಾಯಕ ಸ್ಪಷ್ಟಪಡಿಸಿದರು.