ಕರ್ನಾಟಕ

karnataka

ETV Bharat / state

ಕೋವಿಡ್​ ವಾರ್ಡ್​ನಲ್ಲಿದ್ದರೂ ಮೊಬೈಲ್ ಕದ್ದ ಸೋಂಕಿತ ಕಳ್ಳ..!

ಕೊರೊನಾ ವಾರ್ಡ್​ನಿಂದ ಮೊಬೈಲ್​ ಕದ್ದು ಪರಾರಿಯಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Karwar
Karwar

By

Published : Jun 29, 2020, 2:02 PM IST

ಕಾರವಾರ:ಸೋಂಕು ತಗುಲಿ ಕೋವಿಡ್-19 ಚಿಕಿತ್ಸಾ ವಾರ್ಡ್​ಗೆ ದಾಖಲಿಸಲಾಗಿದ್ದ ಕಳ್ಳತನದ ಆರೋಪಿಯೋರ್ವ ಎರಡು ಮೊಬೈಲ್ ಸಹಿತ ವಾರ್ಡ್ ನಿಂದಲೇ ಪರಾರಿಯಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.

ಧಾರವಾಡ ಮೂಲದ 38 ವರ್ಷದ ಪಿ.12057 ಸಂಖ್ಯೆಯ ಸೋಂಕಿತ ಪರಾರಿಯಾಗಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಬೈಕ್ ಕಳ್ಳತನದಲ್ಲಿ ಈತನನ್ನು ಬಂಧಿಸಲಾಗಿತ್ತು. ಆದರೆ ಈತನಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗಿ ನಿನ್ನೆ ಶಿರಸಿಯ ಸಬ್ ಜೈಲಿನಿಂದ ಕಾರವಾರ ಕೋವಿಡ್ ವಾರ್ಡಿಗೆ ಕರೆತರಲಾಗಿತ್ತು. ಆದರೆ ಇಂದು ಬೆಳಗ್ಗೆ ಆರೋಪಿ ವಾರ್ಡ್​ನಲ್ಲಿದ್ದ ಎರಡು ಮೊಬೈಲ್ ಕದ್ದು ಆಸ್ಪತ್ರೆಯ ಗ್ಲಾಸ್ ಒಡೆದುಕೊಂಡು ಪರಾರಿಯಾಗಿದ್ದ.

ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿ ಕೊನೆಗೂ ಕಾರವಾರ ತಾಲೂಕಿನ ಕದ್ರಾ ಬಳಿ ಸೆರೆ ಹಿಡಿದಿದ್ದಾರೆ. ಆದರೆ ಆತ ಬಸ್ ಮೂಲಕ ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಬಸ್​ನಲ್ಲಿ ತೆರಳಿದವರು ಹಾಗೂ ಪತ್ತೆ ಕಾರ್ಯದಲ್ಲಿದ್ದ ಪೊಲೀಸರಿಗೂ ಇದೀಗ ಸೋಂಕು ತಗಲುವ ಆತಂಕ ಶುರುವಾಗಿದೆ.

ABOUT THE AUTHOR

...view details