ಶಿರಸಿ:ಕೊರೊನಾ ಸೋಂಕಿತ ತಾತನ ಕಿತಾಪತಿಗೆ ಪೊಲೀಸರು ಫಜೀತಿಗೆ ಬಿದ್ದ ಘಟನೆ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.
ಓದಿ: ಕೋವಿಡ್ ಲಸಿಕೆ ಖರೀದಿಗಾಗಿ 100 ಕೋಟಿ ರೂ. ನೀಡಲು ರಾಜ್ಯ ಕಾಂಗ್ರೆಸ್ ನಿರ್ಧಾರ
ಶಿರಸಿ:ಕೊರೊನಾ ಸೋಂಕಿತ ತಾತನ ಕಿತಾಪತಿಗೆ ಪೊಲೀಸರು ಫಜೀತಿಗೆ ಬಿದ್ದ ಘಟನೆ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.
ಓದಿ: ಕೋವಿಡ್ ಲಸಿಕೆ ಖರೀದಿಗಾಗಿ 100 ಕೋಟಿ ರೂ. ನೀಡಲು ರಾಜ್ಯ ಕಾಂಗ್ರೆಸ್ ನಿರ್ಧಾರ
ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಹಿರಿಯರೊಬ್ಬರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಬುಧವಾರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಆದರೆ ವರದಿ ಕೊಡುವ ಮೊದಲೇ ಹಿರಿಯ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದರು.
ತಾತನ ಪರೀಕ್ಷಾ ವರದಿ ನೋಡಿದರೆ ಕೋವಿಡ್ ಪಾಸಿಟಿವ್ ಎಂದು ಬಂದಿತ್ತು. ಇದರಿಂದ ಗಾಬರಿಗೊಂಡ ಆಸ್ಪತ್ರೆ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು. ವಿಷಯ ತಿಳಿದ ಪೊಲೀಸರು ತಾತನನ್ನು ಹುಡುಕಲು ಪ್ರಾರಂಭಿಸಿದ್ದರು. ಅದಾಗಲೇ ಶಿರಸಿ ರಸ್ತೆಯಲ್ಲಿ ನಡೆದು ಸಾಗುತ್ತಿದ್ದ ತಾತ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕೋವಿಡ್ ಹೆಲ್ಪ್ ಲೈನ್ ಚಾಲಕ ಮತ್ತು ಆಸ್ಪತ್ರೆ ಆಂಬುಲೆನ್ಸ್ ಚಾಲಕರಿಬ್ಬರನ್ನು ಪೊಲೀಸರು ಸ್ಥಳಕ್ಕೆ ಕರೆಸಿಕೊಂಡಿದ್ದರು. ಆದರೆ, ಯಾವುದೇ ಕಾರಣಕ್ಕೂ ಆಂಬುಲೆನ್ಸ್ ಹತ್ತಲ್ಲ ಎಂದು ತಾತ ತಪ್ಪಿಸಲೆತ್ನಿಸುತ್ತಿದ್ದ. ನಂತರ ಕೊನೆಗೂ ಪೊಲೀಸರು ಆಂಬುಲೆನ್ಸ್ ಸಿಬ್ಬಂದಿ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು.