ಕರ್ನಾಟಕ

karnataka

ETV Bharat / state

ರೀಲ್​ ಅಲ್ಲ ರಿಯಲ್​... ಬೀದಿಗೆ ಬಂದಿದೆ ಕ್ಯಾಮೆರಾ ನಂಬಿಕೊಂಡವರ ಬದುಕು - ಕೊರೊನಾ ಲೇಟೆಸ್ಟ್​ ನ್ಯೂಸ್​

ಕೊರೊನಾದಿಂದ ಮದುವೆ, ನಾಮಕರಣ ಸೇರಿದಂತೆ ವಿವಿಧ ಶುಭ ಸಮಾರಂಭಗಳು ರದ್ದಾಗಿದ್ದು, ಛಾಯಾಗ್ರಾಹಕರು, ವಿಡಿಯೋಗ್ರಾಫರ್​ಗಳು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ.

ಛಾಯಾಗ್ರಾಹಕರ ಮೇಲೂ ಪರಿಣಾಮ ಬೀರಿದ ಕೊರೊನಾ
Corona effect : Videographer,cameraman facing problems

By

Published : Apr 26, 2020, 12:19 PM IST

Updated : Apr 26, 2020, 3:03 PM IST

ಶಿರಸಿ: ಮದುವೆ, ನಾಮಕರಣ ಸೇರಿದಂತೆ ವಿವಿಧ ಶುಭ ಸಮಾರಂಭಗಳಿಗೆ ಛಾಯಾಗ್ರಾಹಕರು, ವಿಡಿಯೋಗ್ರಾಫರ್​ಗಳು ಬೇಕೇ ಬೇಕು. ಆದರೆ ಕೊರೊನಾದಿಂದ ಎಲ್ಲಾ ಕಾರ್ಯಕ್ರಮಗಳು ರದ್ದಾಗಿದ್ದು, ಕೆಲಸವಿಲ್ಲದೆ ಕ್ಯಾಮೆರಗಳು ಧೂಳು ಹಿಡಿಯುತ್ತಿವೆ.

ಬೀದಿಗೆ ಬಂದಿದೆ ಕ್ಯಾಮೆರಾ ನಂಬಿಕೊಂಡವರ ಬದುಕು

ತಾಲೂಕಿನಾದ್ಯಂತ ಸುಮಾರು ನೂರಕ್ಕೂ ಅಧಿಕ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್​ಗಳಿದ್ದು, ಇದನ್ನೇ ವೃತ್ತಿಯಾಗಿಸಿಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ಇತರೆ ಕೆಲಸದ ಜೊತೆಗೆ ಫೋಟೊಗ್ರಫಿಯನ್ನು ಪಾರ್ಟ್​ಟೈಮ್​ ಕೆಲಸವನ್ನಾಗಿಸಿಕೊಂಡಿದ್ದಾರೆ. ಆದರೆ ಕೊರೊನಾದಿಂದ ಇವರೆಲ್ಲ ಕೆಲಸವಿಲ್ಲದೆ ಮನೆಯಲ್ಲೆ ಕುಳಿತುಕೊಳ್ಳುವಂತಾಗಿದೆ.

ಛಾಯಾಗ್ರಾಹಕರು ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿದ್ದು, ಇವರ ನಿಗದಿತ ಮಾಹಿತಿ ಸರ್ಕಾರಕ್ಕೂ ಇಲ್ಲದಂತಾಗಿದೆ. ಮಾರ್ಚ್​-ಜೂನ್​ನಲ್ಲಿ ಮದುವೆ ಸಮಾರಂಭಗಳು ಅತಿ ಹೆಚ್ಚು ನಡೆಯುತ್ತವೆ. ಕೊರೊನಾದಿಂದಾಗಿ ಕೆಲಸವಿಲ್ಲದೆ, ಆದಾಯವಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಛಾಯಾಗ್ರಾಹಕರು, ವಿಡಿಯೋಗ್ರಾಫರ್​ಗಳು ನಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ ಸರ್ಕಾರ ಸಹಾಯಧನ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Last Updated : Apr 26, 2020, 3:03 PM IST

ABOUT THE AUTHOR

...view details