ಕಾರವಾರ: ಲಾಕ್ಡೌನ್ನಿಂದಾಗಿ ಕಾರವಾರದಲ್ಲಿಸಿಲುಕಿಕೊಂಡಿದ್ದ ಕಾರ್ಮಿಕನೊಬ್ಬನಿಗೆ ಇಹಲೋಕ ತ್ಯಜಿಸಿದ ತನ್ನ ಹೆತ್ತ ತಾಯಿಯ ಮುಖವನ್ನು ಕೊನೆ ಕ್ಷಣದಲ್ಲೂ ನೋಡಲಾಗದ ಸ್ಥಿತಿ ಬಂದೊದಗಿದೆ.
ಮಾರ್ಚ್ 24ರಂದು ಬೆಂಗಳೂರಿನಿಂದ ಗೋವಾದ ಪಣಜಿಗೆ ಕೆಲಸಕ್ಕೆಂದು ತೆರಳುವಾಗ ಲಾಕ್ಡೌನ್ನಿಂದಾಗಿ ಕಾರವಾರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅಸ್ಸೋಂ ಮೂಲದ ಬಾಬುಲು ಮಾಜಿ ಕೊನೆ ಕ್ಷಣದಲ್ಲೂ ಹೆತ್ತ ತಾಯಿ ಮುಖ ನೋಡಲಾಗದೇ ಪರಿತಪಿಸಿದ್ದಾನೆ.
ಕೊನೆಯುಸಿರೆಳೆದ ತಾಯಿಯ ಮುಖನೋಡಲಾಗದ ಕಾರ್ಮಿಕ ಅಧಿಕಾರಿಗಳು ಕಾರ್ಮಿಕರು ನಿರ್ಗತಿಕರಿಗೆ ನಿರ್ಮಾಣ ಹಂತದ ನಗರಸಭೆ ಕಟ್ಟಡದಲ್ಲಿ ವಸತಿ ಕಲ್ಪಿಸಿದ್ದು, ಸುಮಾರು 15 ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಆದರೆ, ಬುಧವಾರ ಬಾಬುಲು ತಾಯಿ ಸಾವನ್ನಪ್ಪಿರುವ ಸುದ್ದಿ ಬಂದಿದ್ದು, ಯಾವುದೇ ಸಾರಿಗೆ, ರೈಲಿನ ಸಂಚಾರ ಇಲ್ಲದ ಕಾರಣ ಹೆತ್ತ ತಾಯಿಯ ಅಂತ್ಯ ಸಂಸ್ಕಾರಕ್ಕೆ ಹೊಗಲಾಗದೆ ಕಣ್ಣೀರು ಹಾಕಿದ್ದಾನೆ.
ಇನ್ನು ಈ ಬಗ್ಗೆ ಈಟಿವಿ ಭಾರತ್ ನೊಂದಿಗೆ ಮಾತನಾಡಿದ ಅವರು, ಅಮ್ಮನೆ ನನಗೆ ಕೆಲಸಕ್ಕೆ ತೆರಳಲು ಐದು ನೂರು ನೀಡಿದ್ದಳು. ಆದರೆ, ಅವಳು ಇದೀಗ ಇಲ್ಲ. ಮನೆಯಲ್ಲಿ ಪೋನ್ ಮಾಡಿ ತಿಳಿಸಿದರು ನನಗೆ ಹೊಗಲಾಗುತ್ತಿಲ್ಲ. ಅಪ್ಪ ಅಣ್ಣಂದಿರೇ ಎಲ್ಲ ಕಾರ್ಯ ಮಾಡಿದ್ದಾರೆ. ನನಗೆ ಇನ್ನಾದರೂ ಮನೆಗೆ ತೆರಳಲು ಯಾವುದಾದರು ವ್ಯವಸ್ಥೆ ಕಲ್ಪಿಸುವಂತೆ ಅಂಗಲಾಚಿದ್ದಾನೆ.
ಇನ್ನು ಹೀಗೆ ವಿವಿಧ ಭಾಗಗಳಿಗೆ ತೆರಳಬೇಕಾದವರು ಅರ್ಧದಲ್ಲಿಯೇ ಸಿಲುಕಿ ನಗರಸಭೆ ಕಟ್ಟಡದಲ್ಲಿ ಆಶ್ರಯ ಪಡೆದಿದ್ದು, ವಿವಿಧ ಸಂಘಟನೆಗಳಿಂದ ಊಟ ಪೂರೈಕೆ ಮಾಡಲಾಗುತ್ತಿದೆ. ಆದರೆ ಕೆಲಸ ಕಾರ್ಯವಿಲ್ಲದೇ ಕುಟುಂಬದವರ ಸ್ಥಿತಿ ಹೇಗಿದೆ ಎಂದು ತಿಳಿಯಲಾಗದ ಸ್ಥಿತಿ ನಮ್ಮದಾಗಿದ್ದು, ಸರ್ಕಾರ ತಮ್ಮನ್ನು ಮನೆಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕು ಎಂಬುದು ಕಾರ್ಮಿಕರ ಒತ್ತಾಯವಾಗಿದೆ.