ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ ಇಳಿಕೆ ಕಂಡ ಕೊರೊನಾ: ಇಂದು 573 ಮಂದಿಯಲ್ಲಿ ಸೋಂಕು ಪತ್ತೆ - Corona declines in Uttarakannada

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸಾವಿರ ಗಡಿಯಲ್ಲಿಯೇ ಕಂಡು ಬರುತ್ತಿದ್ದ ಸೋಂಕಿತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ.

ಕೊರೊನಾ
ಕೊರೊನಾ

By

Published : May 26, 2021, 10:18 PM IST

ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಏರುಗತಿಯಲ್ಲಿ ಸಾಗಿದ್ದ ಕೊರೊನಾ‌ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಇಂದು 573 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕಳೆದ ಕೆಲ ದಿನಗಳಿಂದ ಸಾವಿರ ಗಡಿಯಲ್ಲಿಯೇ ಕಂಡು ಬರುತ್ತಿದ್ದ ಸೋಂಕಿತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಇಂದು ದಾಖಲಾದ ಪಾಸಿಟಿವ್ ಪ್ರಕರಣಗಳ ಪೈಕಿ ಕಾರವಾರ 37, ಅಂಕೋಲಾ 12, ಕುಮಟಾ 89, ಹೊನ್ನಾವರ 148, ಭಟ್ಕಳ 61, ಶಿರಸಿ 35, ಸಿದ್ದಾಪುರ 111, ಯಲ್ಲಾಪುರ 15, ಮುಂಡಗೋಡ 07, ಹಳಿಯಾಳ 30, ಜೋಯಿಡಾದಲ್ಲಿ 28 ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಸದ್ಯ 5,916 ಸಕ್ರಿಯ ಕೊರೊನಾ ಸೋಂಕಿತರಿದ್ದು, ಈ ಪೈಕಿ 503 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ, 5,413 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 42,059ಕ್ಕೆ ಏರಿಕೆಯಾದಂತಾಗಿದೆ.

ಇ‌ನ್ನು ನಿನ್ನೆ ಒಂದೇ ದಿ‌ನ 773 ಮಂದಿ‌ ಸೋಂಕಿತರು ಗುಣಮುಖರಾಗಿದ್ದು, 10 ಮಂದಿ ಸಾವನ್ನಪ್ಪಿ ಒಟ್ಟು 541 ಮಂದಿ ಸಾವನ್ನಪ್ಪಿದಂತಾಗಿದೆ. ಇದುವರೆಗೆ ಜಿಲ್ಲಾದ್ಯಂತ 35,582 ಮಂದಿ ಚೇತರಿಸಿಕೊಂಡಂತಾಗಿದೆ.

ABOUT THE AUTHOR

...view details