ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಂದು 170 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 11,633ಕ್ಕೆ ಏರಿಕೆಯಾಗಿದೆ.
ಉ.ಕನ್ನಡದಲ್ಲಿ 170 ಮಂದಿಗೆ ಕೋವಿಡ್: 99 ಸೋಂಕಿತರು ಗುಣಮುಖ - Corona
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು,ಮಹಾಮಾರಿಗೆ ಇಲ್ಲಿಯವರೆಗೆ 145 ಮಂದಿ ಮೃತಪಟ್ಟಿದ್ದಾರೆ.
ಉ.ಕ ಮತ್ತೆ 170 ಮಂದಿಗೆ ಕೋವಿಡ್
ಕಾರವಾರದಲ್ಲಿ 9, ಅಂಕೋಲಾ 4, ಕುಮಟಾ 35, ಹೊನ್ನಾವರ 20, ಶಿರಸಿ 9, ಸಿದ್ದಾಪುರ 6, ಯಲ್ಲಾಪುರ 13, ಮುಂಡಗೋಡ 73 ಹಾಗೂ ಜೋಯಿಡಾದಲ್ಲಿ ಓರ್ವನಿಗೆ ಸೋಂಕು ದೃಢಪಟ್ಟಿದೆ. ಇಂದು ಒಟ್ಟು 99 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕುಮಟಾದಲ್ಲಿ ಇಬ್ಬರು, ಹೊನ್ನಾವರ ಹಾಗೂ ಹಳಿಯಾಳದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. 679 ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದರೆ, 624 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 1,303 ಸಕ್ರಿಯ ಪ್ರಕರಣಗಳು ಸದ್ಯ ಜಿಲ್ಲೆಯಲ್ಲಿದ್ದು, ಒಟ್ಟು 145 ಮಂದಿ ಮೃತಪಟ್ಟಿದ್ದಾರೆ.