ಕಾರವಾರ :ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡು ಬೀದಿಯಲ್ಲಿ ನರಳಾಡುತ್ತಿದ್ದ ಮಂಗವೊಂದಕ್ಕೆ ಪೊಲೀಸರು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿರುವ ಘಟನೆ ಮುಂಡಗೋಡದಲ್ಲಿ ನಡೆದಿದೆ.
ಅಪಘಾತದಿಂದ ನರಳಾಡುತ್ತಿದ್ದ ಮಂಗಕ್ಕೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪೊಲೀಸರು - cops treating a monkey
ಎದ್ದು ಓಡಾಡಲು ಆಗದಷ್ಟು ಬಳಲಿರುವ ಮಂಗವು ಠಾಣೆಯ ಆವರಣದಲ್ಲಿ ಮಲಗಿತ್ತು. ಮಂಗ ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದನ್ನು ಗಮನಿಸಿ ಠಾಣೆಗೆ ತಂದು ಚಿಕಿತ್ಸೆ ನೀಡಲಾಗಿದೆ..

ಮಂಗಕ್ಕೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪೊಲೀಸರು
ಪಟ್ಟಣದ ಬಡ್ಡಿಗೇರಿ ಕ್ರಾಸ್ ಬಳಿ ಶುಕ್ರವಾರ ಅಪರಿಚಿತ ವಾಹನ ಬಡಿದು ಗಂಭೀರ ಗಾಯಗೊಂಡಿದ್ದ ಮಂಗವೊಂದು ರಸ್ತೆ ಬದಿಯಲ್ಲಿ ನರಳಾಡುತ್ತಿತ್ತು. ಅದೇ ಮಾರ್ಗದಲ್ಲಿ ಬರುತ್ತಿದ್ದ ಇಲ್ಲಿನ ಠಾಣೆಯ ಪೊಲೀಸರು ಗಾಯಗೊಂಡ ಮಂಗವನ್ನು ನೋಡಿ, ಅದನ್ನು ಪೊಲೀಸ್ ಜೀಪಿನಲ್ಲಿಯೇ ಠಾಣೆಗೆ ತಂದಿದ್ದಾರೆ. ನಂತರ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ.
ಎದ್ದು ಓಡಾಡಲು ಆಗದಷ್ಟು ಬಳಲಿರುವ ಮಂಗವು ಠಾಣೆಯ ಆವರಣದಲ್ಲಿ ಮಲಗಿತ್ತು. ಮಂಗ ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದನ್ನು ಗಮನಿಸಿ ಠಾಣೆಗೆ ತಂದು ಚಿಕಿತ್ಸೆ ನೀಡಲಾಗಿದೆ. ಸದ್ಯ ಮಂಗ ಚೇತರಿಸಿಕೊಳ್ಳುತ್ತಿದೆ ಎಂದು ಪಿಎಸ್‌ಐ ಬಸವರಾಜ ಮಬನೂರ ಹೇಳಿದರು.