ಶಿರಸಿ: ಸಹಕಾರಿ, ಸಾಮಾಜಿಕ, ಕೃಷಿ, ಬ್ಯಾಂಕಿಂಗ್, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಉತ್ತರ ಕನ್ನಡದ ಹಿರಿಯ ಮುತ್ಸದ್ಧಿ ಶಿರಸಿಯ ಡಾ. ವಿ.ಎಸ್. ಸೋಂದೆ ಅವರು ನಿಧನರಾಗಿದ್ದಾರೆ.
ಸಹಕಾರಿ ರಂಗದ ಹಿರಿಯ ಮುತ್ಸದ್ಧಿ ಡಾ.ಸೋಂದೆ ಇನ್ನಿಲ್ಲ - ಶಿರಸಿಯ ಡಾ.ವಿ.ಎಸ್.ಸೋಂದೆ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿರಸಿಯ ಡಾ.ವಿ.ಎಸ್. ಸೋಂದೆ ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಸಹಕಾರಿ ರಂಗದ ಹಿರಿಯ ಮುತ್ಸದ್ಧಿ ಡಾ.ಸೋಂದೆ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದರು. ಮೃತರು ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶಿಕ್ಷಣ ಸಂಸ್ಥೆ ಎಂ.ಇ.ಎಸ್, ಅರ್ಬನ್ ಬ್ಯಾಂಕ್ ಗಳಲ್ಲಿ ದಶಕಗಳ ಕಾಲ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅನೇಕ ಸಾಹಿತ್ಯ ರಚನೆ ಮಾಡಿರುವ ಅವರು, ಸಹಕಾರಿ ರಂಗದ ಹಿರಿಯ ಮುತ್ಸದ್ಧಿಗಳು ಎನಿಸಿಕೊಂಡಿದ್ದರು. ಜೊತೆಗೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೊಡ್ಮನೆ ಅವರ ನಿಕಟ ವರ್ತಿಗಳಾಗಿದ್ದರು.