ಶಿರಸಿ: ಲಾಕ್ಡೌನ್ನಿಂದ ರಾಜ್ಯದಲ್ಲಿ ಕೆಲಸ ಮಾಡುವ ಲಕ್ಷಾಂತರ ವಲಸೆ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾಗ ಅವರ ಸಹಾಯಕ್ಕೆ ಆಗಮಿಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಕಾರ್ಯ ವೈಖರಿಗೆ ಉತ್ತರ ಪ್ರದೇಶದ ಸಚಿವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಚಿವ ಹೆಬ್ಬಾರ್ಗೆ ಪತ್ರವೊಂದನ್ನು ಬರೆದಿದ್ದಾರೆ.
ಕಾರ್ಮಿಕರಿಗೆ ಸಹಾಯ: ಉತ್ತರ ಪ್ರದೇಶ ಸಚಿವರಿಂದ ಹೆಬ್ಬಾರ್ಗೆ ಅಭಿನಂದನಾ ಪತ್ರ - Uttar Pradesh Minister
ಲಾಕ್ಡೌನ್ ವೇಳೆ ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗೆ ರಾಜ್ಯದ ಕಾರ್ಮಿಕ ಇಲಾಖೆಯಿಂದ ಊಟ, ವಸತಿ ಹಾಗೂ ದಿನಸಿ ಸಾಮಗ್ರಿಗಳನ್ನು ನೀಡಲಾಗಿತ್ತು. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಸಹಕಾರಿ ಸಚಿವ ಮುಕುಟ್ ಬಿಹಾರಿ ವರ್ಮಾ, ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಅಭಿನಂದನಾ ಪತ್ರ ಕಳುಹಿಸಿದ್ದಾರೆ.
![ಕಾರ್ಮಿಕರಿಗೆ ಸಹಾಯ: ಉತ್ತರ ಪ್ರದೇಶ ಸಚಿವರಿಂದ ಹೆಬ್ಬಾರ್ಗೆ ಅಭಿನಂದನಾ ಪತ್ರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್](https://etvbharatimages.akamaized.net/etvbharat/prod-images/768-512-7201510-52-7201510-1589473980494.jpg)
ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗೆ ರಾಜ್ಯದ ಕಾರ್ಮಿಕ ಇಲಾಖೆಯಿಂದ ಊಟ, ವಸತಿ ಹಾಗೂ ದಿನಸಿ ಸಾಮಗ್ರಿಗಳನ್ನು ನೀಡಿ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಸಹಕಾರಿ ಸಚಿವ ಮುಕುಟ್ ಬಿಹಾರಿ ವರ್ಮಾ, ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಅಭಿನಂದನಾ ಪತ್ರವನ್ನು ಕಳುಹಿಸಿದ್ದಾರೆ.
ಪತ್ರದಲ್ಲಿ ಕರ್ನಾಟಕದಲ್ಲಿ ಸಿಲುಕಿಕೊಂಡಿದ್ದ ನಮ್ಮ ರಾಜ್ಯದ ಕಾರ್ಮಿಕರಿಗೆ ಊಟ, ದಿನಸಿ ಸಾಮಗ್ರಿ ಹಾಗೂ ಮಾಸ್ಕ್, ಸ್ಯಾನಿಟೈಸರ್ ಸಮರ್ಪಕವಾಗಿ ಪೂರೈಸಿ, ನಮ್ಮ ಕಾರ್ಮಿಕರನ್ನು ರಾಜ್ಯಕ್ಕೆ ಕಳುಹಿಸಿದಕ್ಕೆ ಉತ್ತರ ಪ್ರದೇಶದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೆನೆ ಎಂದು ಉಲ್ಲೇಖಿಸಿದ್ದಾರೆ.